ಕರ್ನಾಟಕದ ಸಮಗ್ರ, ಸುವರ್ಣ ಅಭಿವೃದ್ಧಿಗೆ ನಮ್ಮ ಬದ್ದತೆ, ಆದ್ಯತೆ: ಸಂತೋಷ ಲಾಡ್

ಧಾರವಾಡ : ನಮ್ಮ ನಾಯಕರು ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಜಿಲ್ಲಾಡಳಿತ, ಹು-ಧಾ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರದ ಕೆಸಿಡಿ ಮೈದಾನದಲ್ಲಿ ಸೋಮವಾರ ನಡೆದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರೂ.1,058 ಕೋಟಿ ವೆಚ್ಚದಲ್ಲಿ ಗ್ಯಾರಂಟಿ ಯೋಜನೆ ಮೂಲಕ ರಾಜ್ಯದ ಜನತೆಗೆ ವಿವಿಧ ಸೌಲಭ್ಯ ತಲುಪಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರ ಶಕ್ತಿ ಯೋಜನೆ ಮೂಲಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಈ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಧರ್ಮಸ್ಥಳದ ನಡೆದಾಡುವ ದೇವರ ಡಾ.ವೀರೇಂದ್ರೆ ಹೆಗ್ಗಡೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದರು.

ಹಿಂದು ಬಿಲ್ ಕೋಡ್ ತಂದಿದ್ದೇ ಡಾ.ಅಂಬೇಡ್ಕರ್. ಈ ಕಾನೂನು ಜಾರಿಗೆ ತಂದ ಕಾರಣಕ್ಕೆ ಇಂದು ಎಲ್ಲರಿಗೂ ಹಿರಿಯರ ಆಸ್ತಿ ಲಭಿಸುತ್ತದೆ ಎಂದು ಹೇಳಿದರು. ರಾಜ್ಯ ಕಾಂಗ್ರೆಸ್ ಸರಕಾರ ಬಡವರ ಪರ ಇದೆ. ಇದೇ ಕಾರಣಕ್ಕೆ 1058 ಕೋಟಿ ಯೋಜನೆ ಜನರಿಗೆ ನೀಡಿದೆ ಎಂದು ತಿಳಿಸಿದರು. ಇದೊಂದು ಐತಿಹಾಸಿಕ ಕಾರ್ಯಕ್ರಮ: ಇದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಒಟ್ಟು 3,54,437 ಮಹಿಳಾ ಫಲಾನುಯಭವಿಗಳು ಇದರ ಸದುಪಯೋಗವನ್ನು ಪಡೆದುಕೊಂಡಿದ್ದು, ಈ ಯೋಜನೆಯಡಿಯಲ್ಲಿ ರೂ. 354.43 ಅನುದಾನವನ್ನು ವಿತರಿಸಲಾಗಿದೆ.
ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಜನೇವರಿ ಅಂತ್ಯದವರೆಗೆ ಒಟ್ಟು 4,39,278 ಗೃಹ ಬಳಕೆದಾರರು ಈ ಯೋಜನೆಯನ್ನು ಪಡೆದುಕೊಂಡಿದ್ದು, ಇದಕ್ಕಾಗಿ ಇಲಾಖೆಯು ರೂ.30.96 ಕೋಟಿ ಅನುದಾನ ವನ್ನು ವಿನಿಯೋಗಿಸಿದೆ.
ನಮ್ಮ ಜಿಲ್ಲೆಯ ಮಹಿಳೆಯರು ಈ ಶಕ್ತಿ ಯೋಜನೆಯನ್ನು ಅತ್ಯಂತ ಹರ್ಷದಿಂದ ಸ್ವಾಗತಿಸಿದ್ದು, ಇದರ ಸದುಪಯೋಗವನ್ನು ಜಿಲ್ಲೆಯಲ್ಲಿ ಒಟ್ಟು 7.39 ಕೋಟಿ ಮಹಿಳಾ ಫಲಾನುಭವಿಗಳು ಉಚಿತವಾಗಿ ಸರಕಾರಿ ಬಸ್ ಗಳಲ್ಲಿ ಓಡಾಡುತ್ತಿದ್ದು, ಇದರಿಂದಾಗಿ ರೂ. 149.64 ಕೋಟಿ ಅನುದಾನದ ಸೇವೆ ಬಳಕೆಯಾಗಿದೆ.

ಅನ್ನಭಾಗ್ಯ ಯೋಜನೆಯು ಬಡವರ, ದೀನದಲಿತರ ಆಶಾ ಸಂಜೀವಿನಿಯಾಗಿ ಹೊರಮೊಮ್ಮಿದೆ. ಈ ಯೋಜನೆಯನ್ನು ಜಿಲ್ಲೆಯಲ್ಲಿ ಡಿಸೆಂಬರ ತಿಂಗಳ ಅಂತ್ಯದವರೆಗೆ 3,37,117 ಕುಟುಂಬಗಳು ಬಳಸಿಕೊಂಡಿದ್ದು, ಇದಕ್ಕಾಗಿ ನಮ್ಮ ಸರಕಾರದಿಂದ ರೂ. 112.39 ಕೋಟಿ ಬಳಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾವೇಶದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಸ್ವಾಗತಿಸಿದರು. ಪೆÇಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಸದಸ್ಯರಾದ ಡಾ.ಮಯೂರ ಮೋರೆ, ಕವಿತಾ ಕಬ್ಬೇರ, ಶಂಭು ಸಾಲಮನಿ ಸೇರಿದಂತೆ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗುರುಕುಲ ಸಂಗೀತ ಶಾಲೆಯ ವಿದ್ಯರ್ಥಿಗಳಾದ ಜ್ಞಾನೇಶ ಹಾಗೂ ಓಂಕಾರ ಇವರಿಂದ ಗೀತಗಾಯನ ಮಾಡಿದರು. ಶೃತಿ ಹಾಗೂ ಶ್ರೀಕಾಂತ ಕುಲಕರ್ಣಿ ಮತ್ತು ತಂಡದಿಂದ ಭಾವಗೀತೆ ಜರುಗಿತು.
ರೈಸಿಂಗಿ ಸ್ವಾರ ತಂಡದ ಪ್ರಕಾಶ ಮಾಲ್ಲಿಗವಾಡ ಮತ್ತು ತಂಡದವರು ಜಾನಪದ ಸಮೂಹನೃತ್ಯವನ್ನು ಆಯೋಜಿಸಲಾಗಿದೆ. ಉಡುಪಿಯ ಕಲಾವತಿ ದಯಾನಂದ ಮತ್ತು ತಂಡದಿಂದ ಭಾವಗೀತೆ ಹಾಗೂ ತತ್ವಪದವನ್ನು ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಭಕ್ಷ ಎಂ.ಎಸ್ ಅವರು ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಭೋದಿಸಿದರು. ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು ವಂದಿಸಿದರು.

ಸಮಾವೇಶದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಣೆ ಮಾಡಲಾಯಿತು. ಸಮಾವೇಶದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತಕ್ಷೆತ್ರ ಹಾಗೂ ಧಾರವಾಡ ಗ್ರಾಮೀಣ ಮತಕ್ಷೇತ್ರದ ಸುಮಾರು 30 ಸಾವಿರಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸಿ, ಯಶಸ್ವಿಗೊಳಿಸಿದರು.

Font Awesome Icons

Leave a Reply

Your email address will not be published. Required fields are marked *