ಕರ್ನಾಟಕ ಹೈಕೋರ್ಟ್​ಗೆ ನೂತನ ಸಿಜೆ ನೇಮಕಕ್ಕೆ ರಾಷ್ಟ್ರಪತಿ ಅಂಕಿತ

ಬೆಂಗಳೂರು: ಕರ್ನಾಟಕ ಹೈಕೋರ್ಟ್​ಗೆ ನೂತನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆ) ನಿಲಯ್ ವಿಪಿನ್​ಚಂದ್ರ ಅಂಜಾರಿಯಾ ಅವರ ನೇಮಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.

ಹಾಲಿ ಮುಖ್ಯ ನ್ಯಾಯಾಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರು ಇದೇ ಫೆಬ್ರವರಿ 24ರಂದು ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕೊಲಿಜಿಯಂ, ನಿಲಯ್ ವಿಪಿನ್​ಚಂದ್ರ ಅಂಜಾರಿಯಾ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಇದೀಗ ರಾಷ್ಟ್ರಪತಿ ಅಂಕಿತ ಬಿದ್ದಿದ್ದು, ದಿನೇಶ್ ಕುಮಾರ್ ನಿವೃತ್ತಿ‌ ನಂತರ ಅಂಜಾರಿಯಾ ಅವರು ಕರ್ನಾಟಕ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ಇನ್ನು ಕರ್ನಾಟಕ ಹೈಕೋರ್ಟ್​ನ ನೂತನ ಸಿಜೆ ಅಂಜಾರಿಯಾ ಅವರು 2011ರಿಂದ ಗುಜರಾತ್​ ಹೈಕೋರ್ಟ್​​ನಲ್ಲಿ ನ್ಯಾಯಮೂರ್ತಿಯಾಗಿಯಾಗಿದ್ದರು. ಹೈಕೋರ್ಟ್​ ನ್ಯಾಯಧೀಶರಾಗಿ ಬಡ್ತಿ ಪಡೆಯುವ ಮೊದಲು ಅವರು ಗುಜರಾತ್​ ಹೈಕೋರ್ಟ್​​ನಲ್ಲಿ ಸಿವಿಲ್, ಸಾಂವಿಧಾನಿಕ, ಕಂಪನಿ ಕಾನೂನು, ಕಾರ್ಮಿಕ ಮತ್ತು ಸೇವಾ ವಿಷಯಗಳ ವಕೀಲಿಕೆ ಮಾಡಿದ್ದಾರೆ. ಅಲ್ಲದೇ ಸಿವಿಲ್​​ ಮತ್ತು ಸಾಂವಿಧಾನಿಕ ಪ್ರಕರಣಗಳಲ್ಲಿ ಅವರು ಪರಿಣತಿ ಹೊಂದಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *