ಕರ್ಪೂರದಲ್ಲಿ ನಾವು ಸ್ನಾನ ಮಾಡಿದ್ರೆ ಏನೇನಾಗುತ್ತೆ ಗೊತ್ತಾ?

ನಾವು ಪ್ರತಿದಿನ ಸ್ನಾನ ಮಾಡ್ತೀವಿ. ಆದ್ರೆ ಸ್ನಾನ ಮಾಡಿದ ಒಂದು ಗಂಟೆಗೆಲ್ಲಾ ಆ ಫ್ರೆಶ್‍ನೆಸ್ ಕಡಿಮೆಯಾಗುತ್ತೆ. ಬೆವರಿನ ವಾಸನೆ ಬರೋಕೆ ಶುರುವಾಗುತ್ತೆ. ಆ ವಾಸನೆ ಕಂಟ್ರೋಲ್ ಮಾಡೋಕೆ ಪರ್ಫ್ಯೂಮ್, ಡಿಯೋಡೆಂಟ್ ಹಾಕೊಳ್ತೀವಿ. ಅವೂ ಕೂಡ ಒಂದು ಗಂಟೆ ಮಾತ್ರ ಫ್ರೆಶ್ ಆಗಿ ಇಡಬಲ್ಲವು. ಅಷ್ಟೇ. ಆದ್ರೆ ನಾವು ಸ್ನಾನ ಮಾಡೋ ಟೈಮ್‍ ಅಲ್ಲಿ ಒಂದು ಪುಟ್ಟ ಕರ್ಪೂರದ ತುಂಡನ್ನ ಆ ಸ್ನಾನದ ನೀರಿನಲ್ಲಿ ಹಾಕಿ ಮಿಕ್ಸ್ ಮಾಡಿ ಸ್ನಾನ ಮಾಡಿದ್ರೆ ದಿನವಿಡೀ ಫ್ರೆಶ್ ಆಗಿ ಇರೋದಲ್ಲದೆ ನಮ್ಮ ಸೌಂದರ್ಯವೂ ಹೆಚ್ಚುತ್ತೆ ಅಂತ ನಿಮಗೆ ಗೊತ್ತಾ?  ಕರ್ಪೂರದಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ಬಯೋಟಿಕ್ ಅಂಶಗಳಿವೆ. ನೀರಿನಲ್ಲಿ ಹಾಕಿ ಸ್ನಾನ ಮಾಡಿದ್ರೆ ತುರಿಕೆ, ದದ್ದು, ಮೊಡವೆ ಹೋಗುತ್ತೆ. ಚರ್ಮ ಬೆಳಗಾಗುತ್ತೆ. ನೈಸರ್ಗಿಕ ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತೆ.

ಕರ್ಪೂರ

ಸ್ನಾನ ಮಾಡುವಾಗ ಕರ್ಪೂರದ ಪರಿಮಳ ಮಾನಸಿಕ ಒತ್ತಡ, ಆತಂಕವನ್ನ ಕಡಿಮೆ ಮಾಡುತ್ತೆ. ಈಗಿನ ಕಾಲದಲ್ಲಿ ಕೆಲಸದ ಒತ್ತಡದಿಂದ ಬಳಲುವವರು ತುಂಬಾ ಜನ ಇದ್ದಾರೆ. ಅವರು ಸ್ನಾನ ಮಾಡುವಾಗ ಈ ಕರ್ಪೂರವನ್ನ ಬಳಸಿದ್ರೆ ಆ ಒತ್ತಡದಿಂದ ಹೊರಬರೋ ಸಾಧ್ಯತೆ ತುಂಬಾ ಇರುತ್ತೆ. ಸ್ಟ್ರೆಸ್ ರಿಲೀಫ್ ಆಗುತ್ತೆ. ಅಷ್ಟೇ ಅಲ್ಲ ಹಲವಾರು ರೀತಿಯ ದೈಹಿಕ ಸಮಸ್ಯೆಗಳನ್ನೂ ಕಡಿಮೆ ಮಾಡುತ್ತೆ. ತಲೆನೋವು, ಬೆನ್ನು ನೋವು ಕಡಿಮೆಯಾಗುತ್ತೆ. ಕೀಲು ನೋವು, ಗಾಯಗಳಿಂದ ಬಳಲುವವರು ಆಗಾಗ್ಗೆ ಈ ಕರ್ಪೂರ ಹಾಕಿ ಸ್ನಾನ ಮಾಡಿದ್ರೆ ನೋವಿಗೆ ಒಳ್ಳೆಯ ಪರಿಹಾರ ಸಿಗುತ್ತೆ.

ಕರ್ಪೂರ ಸ್ನಾನ

ಕರ್ಪೂರವನ್ನ ಬಿಸಿ ನೀರಿನಲ್ಲಿ ಹಾಕಿ ಸ್ನಾನ ಮಾಡಿದ್ರೆ ಆಯಾಸ, ಆಲಸ್ಯ ಕಡಿಮೆಯಾಗಿ ಉಲ್ಲಾಸ, ಚುರುಕುತನ ಬರುತ್ತೆ. ಹೊಸ ಶಕ್ತಿ ಬಂದಂತಾಗುತ್ತೆ. ಈ ನೀರಿನಿಂದ ಬರುವ ಪರಿಮಳದಿಂದ ಮನಸ್ಸಿಗೆ ಶಾಂತಿ ಸಿಗುತ್ತೆ. ರಾತ್ರಿ ಹೀಗೆ ಮಾಡಿದ್ರೆ ನಿದ್ದೆ ಚೆನ್ನಾಗಿ ಬರುತ್ತೆ. (ಗಮನಿಸಿ: ಇಂಟರ್ನೆಟ್‍ನಲ್ಲಿ ಸಿಗುವ ಮಾಹಿತಿ ಆಧಾರದ ಮೇಲೆ ಈ ವಿವರಗಳನ್ನ ನಿಮಗೆ ನೀಡಲಾಗಿದೆ. ಇದು ಕೇವಲ ಮಾಹಿತಿಗಾಗಿ ಮಾತ್ರ. AsianetNewskannada.com ಇದಕ್ಕೆ ಯಾವುದೇ ಪ್ರೋತ್ಸಾಹ ನೀಡುವುದಿಲ್ಲ.)

Font Awesome Icons

Leave a Reply

Your email address will not be published. Required fields are marked *