ಹಾಸನ,ಡಿಸೆಂಬರ್,4,2024 (www.justkannada.in): ನಾಳೆ ಹಾಸನದಲ್ಲಿ ಕಾಂಗ್ರೆಸ್ ಜನಕಲ್ಯಾಣ ಸಮಾವೇಶ ನಡೆಸುತ್ತಿದ್ದು ಈ ಕುರಿತು ಮಾಜಿ ಸಚಿವ ಹಾಗೂ ಶಾಸಕ ಹೆಚ್.ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಹೆಚ್.ಡಿ ರೇವಣ್ಣ, ಕಾಂಗ್ರೆಸ್ ಸಮಾವೇಶ ಮಾಡಲಿ ನಾವು ತಲೆಕೆಡಿಸಿಕೊಳ್ಳಲ್ಲ. 2028ಕ್ಕೆ ನಾವು ಉತ್ತರ ಕೊಡುತ್ತೇವೆ ಎಂದಿದ್ದಾರೆ.
ಜೆಡಿಎಸ್ ಟಾರ್ಗೆಟ್ ಮಾಡಲಿ. 50 ವರ್ಷದಿಂದ ಹಾಸನಕ್ಕೆ ಕಾಂಗ್ರೆಸ್ ಏನು ಮಾಡಿಲ್ಲ. 2018 ರಲ್ಲಿ ಏನಾಯ್ತು? ಕೊನೆಗೆ ಹೆಚ್ ಡಿ ದೇವೇಗೌಡರ ಬಳಿ ಬರಬೇಕಾಯ್ತು. ನಾವು ಹೆಚ್ ಡಿಕೆ, ಹೆಚ್ ಡಿಡಿ ಸೇರಿ ಅಧಿಕಾರಕ್ಕೆ ತರುತ್ತೇವೆ ಎಂದು ಹೆಚ್.ಡಿ ರೇವಣ್ಣ ನುಡಿದರು.
Key words: Hassan, congress, Jana kalyan samavesha, MLA, HD Revanna