ಕಲಬುರಗಿ: ಹಿಂದುಳಿದ ವರ್ಗಗಳ ಬಹು ಬೇಡಿಕೆಯ ಆಶಯ ಕಾಂತರಾಜು ವರಿದಿ ಬಿಡುಗಡೆಗೆ ಜಿಲ್ಲೆಯ ಜಗತ್ತ ವೃತ್ತದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಹಾಂತೇಶ ಕೌಲಗಿ ಸೇರಿದಂತೆ ಹಿಂದುಳಿದ ವರ್ಗಗಳ ಮುಖಂಡರು ಕುಣಿದು ಕುಪ್ಪಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಹಾಂತೇಶ ಕೌಲಗಿ ಇದು ನಮ್ಮ ಹಿಂದುಳಿದ ಜಾತಿಗಳ ಹಿತ ಬಯಸುವ ವರದಿಯಾಗಿದ್ದು, ಇದರಿಂದ ನಮ್ಮ ಜನರ ಆರ್ಥಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿ ತಿಳಿಯುತ್ತದೆ.ಅದಲ್ಲದೇ ನಾವುಗಳು ರಾಜ್ಯದಲ್ಲಿ ಎಷ್ಟು ಜನಸಂಖ್ಯೆ ಹೊಂದಿದ್ದೆವೆ ಎಂಬುವುದು ತಿಳಿಯುತ್ತದೆ. ನಾವು ಇನ್ನೂ ರಾಜ್ಯದಲ್ಲಿ ಯಾವ ಸ್ಥಿತಿಯಲ್ಲಿ ಇದ್ದೆವೆ, ನಮಗೆ ಇನ್ನೂ ಯಾವ ರೀತಿಯ ಸೌಲಭ್ಯಗಳು ಬೇಕು ಎಂಬುವುದು ಅರ್ಥವಾಗುತ್ತದೆ ಎಂದರು.
ಮಾನ್ಯ ಮುಖ್ಯಮಂತ್ರಿಗಳು ಕಾಂತರಾಜು ವರದಿ ಸ್ವೀಕಾರ ಮಾಡುತ್ತೆನೆ ಎಂದು ಹಿಂದುಳಿದ ವರ್ಗಗಳ ಮತ್ತು ದಿನದಲಿತರ ಪರ ಇರುವುದನ್ನು ಮತ್ತೊಮ್ಮೆ ತೋರಿಸಿದ್ದಾರೆ. ಸೌಲಭ್ಯ ವಂಚಿತರ ಪರ ಮತ್ತು ನೊಂದವರ ಪರವಾಗಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಮಾತಿಗೆ ತಕ್ಕಂತೆ ನುಡಿದಂತೆ ನಡೆದಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಪಕ್ಷ ವಿರೋಧ ಪಕ್ಷದಲ್ಲಿಲ್ಲ.ಹಿಂದುಳಿದವರ ವಿರೋಧಿಯಾಗಿ ಕೆಲಸ ಮಾಡುತ್ತಿದೆ.ಯಾಕೆಂದರೆ ಇಲ್ಲಿಯವರೆಗೆ ಕಾಂತರಾಜು ವರದಿ ಬಿಡುಗಡೆ ಮಾಡುವುದನ್ನು ತಡೆ ಹಿಡಿದಿರುವುದು ಕೊಮುವಾದಿ ಬಿಜೆಪಿ ಪಕ್ಷ. ಇಂದು ಅವುಗಳೆಲ್ಲವನ್ನು ಬದಿಗೊತ್ತಿ ವರದಿ ಸ್ವೀಕಾರ ಮಾಡಿರುವ ಸಿದ್ದರಾಮಯ್ಯನವರಿಗೆ ಹಿಂದುಳಿದ ವರ್ಗಗಳ ಕೋಟಿ ನಮನಗಳು ಎಂದರು.
ನಂತರ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದ ವರೆಗೆ ಹಲಗೆ ಬಾಜಾ ಭಾಜಂತ್ರಿ ಬಾರಿಸುತ್ತ ಕುಣಿದು ಕುಪ್ಪಳಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಇದೆ ಸಂದರ್ಭದಲ್ಲಿ ಮುಖಂಡರಾದ ಮಹೆಬುಬಸಾಬ್ ದರವೇಶಿ,ಅರುಣಕುಮಾರ ಕಟಬುರ,ಮಲ್ಲೆಶಿ ಯಾದವ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.