ಉತ್ತರಾಖಂಡ್: ಉತ್ತರಾಖಂಡ್ನ ತೆಹ್ರಿ ಜಿಲ್ಲೆಯ ಯಮುನಾ ಸೇತುವೆ ಬಳಿ ನಾಲೆಗೆ ಕಾರೊಂದು ಉರುಳಿಬಿದ್ದು 6 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗರ್ಭಿಣಿಯೋರ್ವಳನ್ನ 200 ಕಿಲೋ ಮೀಟರ್ ದೂರದ ಡೆಹ್ರಾಡೂನ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ನಾಲೆಗೆ ಉರುಳಿದೆ.
ಉತ್ತರ ಕಾಶಿಯ ಮೋರಿ ಎಂಬ ಪ್ರದೇಶದಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನರ್ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯನ್ನು ಡೆಹ್ರಾಡೂನ್ಗೆ ಕರೆದುಕೊಂಡು ಹೋಗುತ್ತಿದ್ದರು.
ನಾಲೆಯು 500 ಮೀಟರ್ ಆಳ ಇತ್ತು ಎನ್ನಲಾಗಿದೆ. ಪರಿಣಾಮ ಕಾರಿನಲ್ಲಿದ್ದ ಗರ್ಭಿಣಿ, ಆಕೆಯ ಪತಿ ಸೇರಿ ಒಂದೇ ಕುಟುಂಬದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದುರ್ಘಟನೆ ಸಂಭವಿಸಿ ಒಂದು ದಿನ ಕಳೆದ ಮೇಲೆ ಗೊತ್ತಾಗಿದೆ ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.