ಕಾರ್ಕಳ: ವಿಷದ ಬಾಟಲಿ ನುಂಗಿದ ನಾಗರಹಾವಿನ ರಕ್ಷಣೆ

ಉಡುಪಿ: ಹಸುವಿನ ಮೈ ಮೇಲಿನ ಉಣ್ಣೆಗಳನ್ನು ನಿವಾರಣೆ ಮಾಡುವ ವಿಷದ ಬಾಟಲನ್ನು ನಾಗರಹಾವು ನುಂಗಿದ ಘಟನೆ ಉಡುಪಿಯ ನೀರೆ ಬೈಲೂರಿನಲ್ಲಿ ನಡೆದಿದೆ.

ಸ್ಥಳೀಯ ಜಗದೀಶ್ ಎಂಬವರು ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಗೆ ಕರೆ ಮಾಡಿ ಮಾಹಿತಿ ನೀಡಿದರು. ಅದರಂತೆ ಗುರುರಾಜ್ ಸನಿಲ್ ಅವರು ಗೆಳೆಯರೊಂಗಿದೆ ತೆರಳಿ ಹಾವನ್ನು ಹಿಡಿದು ವಿಷದ ಬಾಟಲ್ ಹೊರ ತೆಗೆದು ರಕ್ಷಣೆ ಮಾಡಿದ್ದಾರೆ.

ಹಾವಿನ ರಕ್ಷಣೆಗೆ ಸ್ಥಳೀಯರು, ಉರಗ ತಜ್ಞರು ಹರಸಾಹಸ ಪಟ್ಟಿದ್ದಾರೆ. ಸ್ಥಳೀಯ ಜಗದೀಶ್ ಹಾಗೂ ಅವರ ಗೆಳೆಯ ಸುಜಿತ್ ಎಂಬವರು ಹಾವು ಅವಿತಿದ್ದ ಶೌಚಾಲಯದ ನೆಲವನ್ನು ಪೂರ್ಣ ಒಡೆದು ಕೊನೆಗೆ ಅದರ ಅಡಿಪಾಯದ ಕಲ್ಲುಗಳನ್ನು ಕಿತ್ತು ತೆಗೆದಿದ್ದಾರೆ. ಗುರುರಾಜ್ ಹಾವನ್ನು ಹೊರಗೆ ತರುವಲ್ಲಿ ಯಶಸ್ವಿಯಾದರು.

ನಂತರ ಹಾವನ್ನು ಹಿಡಿದು ಪೂರ್ತಿ ಹೊಟ್ಟೆ ಸೇರಿದ್ದ ವಿಷದ ಬಾಟಲಿಯನ್ನು ಬಹಳ ಜಾಗರೂಕತೆಯಿಂದ ತಳ್ಳುತ್ತಾ ಹೊರ ತೆಗೆದಿದ್ದಾರೆ. ನೀರೆ ಗ್ರಾಮದ ರಿತೇಶ್ ಎಂಬವರು ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಸ್ಥಳೀಯರ ವಿನಂತಿ ಮೇರೆಗೆ ಹಾವನ್ನು ನೀರೆ ಬೈಲೂರು ಸಮೀಪ ಕಾಡಿಗೆ ಬಿಡಲಾಗಿದೆ.

Font Awesome Icons

Leave a Reply

Your email address will not be published. Required fields are marked *