ಹಿಮಾಚಲ ಪ್ರದೇಶ: ಕಾರ್ಗಿಲ್ ಹೀರೋ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ತಾಯಿ ಕಮಲಾಕಾಂತ್ ಬಾತ್ರಾ ವಿಧಿವಶರಾಗಿದ್ದಾರೆ. 77 ವರ್ಷದ ಕಮಲಾಕಾಂತ್ ಬಾತ್ರಾ ಅವರು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪಾಲಂಪುರ್ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಕಾರ್ಗಿಲ್ ಹೀರೋ, ಶೇರ್ ಶಾ ಅಂತಾನೇ ಕರೆಯಲ್ಪಡುವ ಕ್ಯಾಪ್ಟನ್ ವಿಕ್ರಂ ಬಾತ್ರಾ 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದರು. ಅವರಿಗೆ ಮರಣೋತ್ತರವಾಗಿ ಪರಮವೀರ ಚಕ್ರ ನೀಡಿ ಗೌರವಿಸಲಾಗಿತ್ತು. ಕಮಲಾಕಾಂತ್ ಬಾತ್ರಾ ನಿಧನಕ್ಕೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ಸಿಂಗ್ಸುಖು ಸೇರಿದಂತೆ ಅನೇಕ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು ವೀರಮಾತೆ ನಿಧನಕ್ಕೆ ಭಾರತೀಯರು ಕಂಬನಿ ಮಿಡಿದಿದ್ದಾರೆ.
ಕಾರ್ಗಿಲ್ ಹೀರೋ, ಹುತಾತ್ಮ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ತಾಯಿ ಕಮಲಾಕಾಂತ್ ಬಾತ್ರಾ ನಿಧನಕ್ಕೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ತಾಯಿ ಶ್ರೀಮತಿ ಕಮಲಾಕಾಂತ್ ಬಾತ್ರಾ ಅವರ ನಿಧನದ ದುಃಖದ ಸುದ್ದಿ ಬಂದಿದೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡುವಂತೆ ನಾವು ದೇವರನ್ನು ಪ್ರಾರ್ಥಿಸುತ್ತೇವೆ ಅಂತ ಸಿಎಂ ಸುಖವಿಂದರ್ ಸಿಂಗ್ ಸುಖು ಟ್ವೀಟ್ ಮಾಡಿದ್ದಾರೆ.
शहीद कैप्टन विक्रम बत्रा जी की माता श्रीमती कमलकांत बत्रा जी के निधन की दु:खद सूचना मिली।
हम ईश्वर से प्रार्थना करते हैं कि माता जी को श्रीचरणों में स्थान दें और शोकाकुल परिवार को अपार दुःख सहने की क्षमता दें।
ॐ शांति!
– #HPCM ठाकुर @SukhuSukhvinder pic.twitter.com/y95PHblEp9
— CMO HIMACHAL (@CMOFFICEHP) February 14, 2024