ಕಾರ್ಗೊ ಹಡಗು ಮುಳುಗಡೆ: ಭಾರತೀಯರೂ ಸೇರಿ 13 ಮಂದಿ ನಾಪತ್ತೆ

ಅಥೆನ್ಸ್:‌ ಉಪ್ಪು ಸಾಗಿಸುತ್ತಿದ್ದ ಹಡಗೊಂದು ಭಾನುವಾರ ಗ್ರೀಸ್‌ ನ ಲೆಸ್ಬೋಸ್‌ ದ್ವೀಪದ ಬಳಿ ಮುಳುಗಡೆಯಾಗಿದೆ. ಅದರಲ್ಲಿದ್ದ 14 ಸಿಬ್ಬಂದಿ ಪೈಕಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಸಿಬ್ಬಂದಿ ಪೈಕಿ 8 ಈಜಿಪ್ಟ್‌ ನವರಾಗಿದ್ದು, ಉಳಿದವರು ಸಿರಿಯಾ ಮತ್ತು ಭಾರತೀಯರಾಗಿದ್ದಾರೆ. ರ್ಯಾಪ್ಟರ್‌ ಹೆಸರಿನ ಈ ಹಡಗು ಈಜಿಪ್ಟ್‌ ನ ಎಲ್‌ ದಖೈಲಾ ಬಂದರಿನಿಂದ ಇಸ್ತಾಂಬುಲ್‌ಗೆ ಯಾನ ಕೈಗೊಂಡಿತ್ತು. ಈ ವೇಳೆ ತಾಂತ್ರಿಕ ದೋಷ ಉಂಟಾಗಿದೆ ಎಂದು ಗ್ರೀಸ್‌ ಕರಾವಳಿ ಕಾವಲು ಪಡೆ ಹೇಳಿದೆ.

Font Awesome Icons

Leave a Reply

Your email address will not be published. Required fields are marked *