ಬೆಂಗಳೂರು: ಕೀನ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದ ಮಾಜಿ ವೇಗಿ, ಕನ್ನಡಿಗ ದೊಡ್ಡ ಗಣೇಶ್ ಅವರನ್ನು ಕೀನ್ಯಾ ಕ್ರಿಕೆಟ್ ಮಂಡಳಿ ಒಂದೇ ತಿಂಗಳಲ್ಲಿ ವಜಾಗೊಳಿಸಿದೆ.
ಗಣೇಶ್ ನೇಮಕ ಅಸಮರ್ಪಕವಾಗಿದೆ, ಕೆಲವು ಕಾರ್ಯ ವಿಧಾನಗಳನ್ನು ಅನುಸರಿಸಲಾಗಿಲ್ಲ, ಹೀಗಾಗಿ ಈ ನೇಮಕವನ್ನು ಕೀನ್ಯಾ ಕ್ರಿಕೆಟ್ ಕಾರ್ಯಕಾರಿ ಮಂಡಳಿ ಅನುಮೋದಿಸಲು ನಿರಾಕರಿಸಿದೆ ಎಂದು ತಿಳಿದು ಬಂದಿದೆ.
51 ವರ್ಷದ ದೊಡ್ಡ ಗಣೇಶ್ ಕಳೆದ ತಿಂಗಳಷ್ಟೇ ಕೀನ್ಯಾ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಡಿಸೆಂಬರ್‌ನಲ್ಲಿ ಅವರು ಜವಾಬ್ದಾರಿ ವಹಿಸಿಕೊಳ್ಳಬೇಕಾಗಿತ್ತು. ಆದರೆ ಅದಕ್ಕೂ ಮೊದಲೇ ಕೀನ್ಯಾ ಕ್ರಿಕೆಟ್ ಮಂಡಳಿ, ಗಣೇಶ್ ಅವರನ್ನು ವಜಾಗೊಳಿಸಿದೆ.