ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಭೇಟಿ

ಮಂಗಳೂರು:ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರವು ಪೃಕೃತಿಗೆ ಹತ್ತಿರವಾಗಿದ್ದು, ದೈವದ ಹೆಸರಲ್ಲಿ ಇಲ್ಲಿ ಪೃಕೃತಿಯ ಆರಾಧನೆಯಾಗುತ್ತಿದೆ ಎಂದು ಸ್ಯಾಂಡಲ್ ವುಡ್ನ ರಿಯಲ್ ಸ್ಟಾರ್ ನಟ ,ನಿರ್ದೇಶಕ ಉಪೇಂದ್ರ ಹೇಳಿದರು.

ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಸ್ಥಳಕ್ಕೆ ಮಂಗಳವಾರದಂದು ಅವರು ಭೇಟಿ ನೀಡಿ ಡಿ.20 ರಂದು ತೆರೆ ಕಾಣಲಿರುವ ತನ್ನದೇ ನಟನೆ ಮತ್ತು ನಿರ್ದೇಶನದ ಪ್ಯಾನ್ ಇಂಡಿಯ ಸಿನೆಮಾ “UI”ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು ಬಹು ನಿರೀಕ್ಷಿತ “UI”ಚಿತ್ರದ ಪ್ರಮೋಷನ್ ಗಾಗಿ ಮಂಗಳೂರಿಗೆ ಬಂದಿದ್ದೇವೆ.ಕುತ್ತಾರಿನ ಕೊರಗಜ್ಜ ದೈವದ ಕ್ಷೇತ್ರವು ಪೃಕೃತಿ ರಮನೀಯವಾಗಿದೆ.ಕೊರಗಜ್ಜನ ದಯೆಯು ನಮ್ಮ ಮೇಲಿರಲಿ ಎಂದರು. UI ಚಿತ್ರದ ನಿರ್ಮಾಪಕರಾದ ಕೆ.ಪಿ ಶ್ರೀಕಾಂತ್, ಲಹರಿ ವೇಲು,ನವೀನ್ ಮನೋಹರ್ ಮತ್ತು ರಾಜೇಶ್ ಭಟ್ ಜತೆಗಿದ್ದರು.

ಕುತ್ತಾರು ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆದಿಸ್ಥಳ ಟ್ರಸ್ಟ್ ನ ಅಧ್ಯಕ್ಷ,ಉಪಾಧ್ಯಕ್ಷರು ಮತ್ತು ಟ್ರಸ್ಟಿಗಳು ನಟ ಉಪೇಂದ್ರ ಅವರನ್ನ ಕ್ಷೇತ್ರದ ಪರವಾಗಿ ಅಭಿನಂದಿಸಿದರು.

Font Awesome Icons

Leave a Reply

Your email address will not be published. Required fields are marked *