ಕೂದಲಿನ ಬೆಳವಣಿಗೆಗೆ, ಸುಂದರ ಚರ್ಮಕ್ಕೆ ಅರಿಶಿನ ಸಹಕಾರಿ

ಅರಿಶಿನವು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಆದರೆ ಅತಿಯಾದ ಅರಿಶಿನ ಸೇವನೆ ಒಳ್ಳೆಯದಲ್ಲ. ಇದರಿಂದ ಜಠರಗರುಳಿನಲ್ಲಿ ನೋವು, ರಕ್ತ ತೆಳುವಾಗುವುದು ಮತ್ತು ಯಕೃತ್ತಿನ ಕಾಯಿಲೆ ಸೇರಿದಂತೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ಅತಿಯಾದ ಅರಿಶಿನ ಸೇವನೆ ಮಾಡುವುದರಿಂದ ಕಿಬ್ಬೊಟ್ಟೆಯ ಹಿಗ್ಗುವಿಕೆ, ಮಲಬದ್ಧತೆ, ಅತಿಸಾರ, ಅಜೀರ್ಣ, ಗ್ಯಾಸ್, ಆಸಿಡ್ ರಿಫ್ಲಕ್ಸ್ ಮತ್ತು ಹಳದಿ ಮಲದಂತಹ ಜೀರ್ಣಾಂಗ ವ್ಯವಸ್ಥೆಯಲ್ಲಿ ಅಡಚಣೆಗೆ ಕಾರಣವಾಗಬಹುದು. ಕೂದಲಿನ ಬೆಳವಣಿಗೆಗೆ ಮತ್ತು ಸುಂದರ ಚರ್ಮವನ್ನು ಕಾಪಾಡಿಕೊಳ್ಳಲು ಅರಿಶಿನವನ್ನು ಬಳಕೆ ಮಾಡಲಾಗುತ್ತದೆ.

ಆದರೆ ಇದು ಹೆಚ್ಚಾಗಿ ಚರ್ಮದ ದದ್ದುಗಳಿಗೆ ಕಾರಣವಾಗುತ್ತದೆ. ಅರಿಶಿನವನ್ನು ಬಳಕೆ ಮಾಡಿರುವ ಉತ್ಪನ್ನಗಳು ಅತಿಯಾಗಿ ಬಳಸುವುದರಿಂದ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ ಇದು ಕೆಲವರಲ್ಲಿ ಚರ್ಮದ ಅಲರ್ಜಿಗೆ ಕಾರಣವಾಗಬಹುದು. ಅರಿಶಿನವು ರಕ್ತವನ್ನು ತೆಳುಗೊಳಿಸುವ ಗುಣಗಳನ್ನು ಹೊಂದಿದೆ.

ಇದು ರಕ್ತ ಹೆಪ್ಪುಗಟ್ಟಲು ಮತ್ತು ರಕ್ತ ಪರಿಚಲನೆಯನ್ನು ಕ್ರಮಬದ್ಧಗೊಳಿಸಲು ಸಹಕಾರಿಯಾಗಿದೆ. ಆದರೆ ಇದು ಹೆಚ್ಚಿದ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ. ಮೂಗು ಅಥವಾ ಒಸಡಿನಲ್ಲಿ ರಕ್ತಸ್ರಾವವಾಗುವುದು ಮತ್ತು ಮಲ ಅಥವಾ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಅರಿಶಿನ ಸೇವನೆಯ ಅಡ್ಡಪರಿಣಾಮಗಳಾಗಿವೆ.

ಟೈಪ್ 2 ಡಯಾಬಿಟಿಸ್ ಇರುವವರಿಗೆ, ಅರಿಶಿನವು ದೇಹದಲ್ಲಿ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಅತಿಯಾದ ಅರಿಶಿನವು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಕುಸಿತಕ್ಕೆ ಕಾರಣವಾಗಬಹುದು. ಹಾಗಾಗಿ ಅಧ್ಯಯನಗಳ ಪ್ರಕಾರ, ಪ್ರತಿದಿನ 3 ಗ್ರಾಂ ಅರಿಶಿನದ ಪ್ರಮಾಣ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ.

 

 

 

Font Awesome Icons

Leave a Reply

Your email address will not be published. Required fields are marked *