ನಂಜನಗೂಡು: ಬಿತ್ತನೆ ಬೀಜ ಮಾರಾಟದ ಆವರಣದಲ್ಲಿರುವ ಗೋದಾಮಿ ಮೇಲೆ ಕೃಷಿ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆಸಿ 137 ಕ್ವಿಂಟಾಲ್ ಬಿತ್ತನೆ ಬೀಜ ವಶಪಡಿಸಿಕೊಂಡಿದ್ದಾರೆ.
ಸಾಕಷ್ಟು ದಿನಗಳಿಂದ ನಂಜನಗೂಡು ತಾಲೂಕಿನ ಬಿತ್ತನೆ ಬೀಜ ಮಾರಾಟದ ಕೇಂದ್ರಗಳಲ್ಲಿ ರೈತರಿಗೆ ದೊರಕಬೇಕಾದ ಬಿತ್ತನೆ ಬೀಜಗಳನ್ನು ಅನಧಿಕೃತವಾಗಿ ಗೌಪ್ಯವಾಗಿಟ್ಟು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿತ್ತು. ಇದನ್ನು ಅರಿತ ಮೈಸೂರಿನ ಕೃಷಿ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಉನ್ನತ ಮಟ್ಟದ ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದದ್ದರು.
ಮೈಸೂರಿನ ಜಾಗೃತ ಕೋಶ ಮತ್ತು ಜಾಗೃತ ದಳ ಅಧಿಕಾರಿಗಳ ತಂಡ ನಂಜನಗೂಡಿನ ಕೃಷಿ ಅಧಿಕಾರಿಗಳ ಸಹಯೋಗದಲ್ಲಿ ಅನುಮಾನ ವ್ಯಕ್ತವಾಗಿದ್ದ ಕಡೆ ದಾಳಿ ಮಾಡಿದಾಗ ಅಕ್ರಮವಾಗಿ ಬಚ್ಚಿಟ್ಟಿದ್ದ ವಿವಿಧ ಕಂಪನಿಯ ಬತ್ತದ ಬಿತ್ತನೆ ಬೀಜಗಳ ಚೀಲಗಳು ಕೃಷಿ ಮತ್ತು ಜಾಗೃತದಳದ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿವೆ.ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ಮಾರಾಟ ಕೇಂದ್ರ ನಂಜನಗೂಡು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗೋಧಾಮ ಗಳಲ್ಲಿ ಬರೋಬರಿ 137 ಕ್ವಿಂಟಲ್ ವಿವಿಧ ಬಗೆಯ ಬತ್ತದ ಬಿತ್ತನೆ ಬೀಜದ ಚೀಲಗಳನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ.ಮೈಸೂರಿನ ಕೃಷಿ ಉಪ ನಿರ್ದೇಶಕರಾದ ಶ್ರೀ ಭಾನುಪ್ರಕಾಶ್ ಜಾಗೃತ ದಳದ ಅಧಿಕಾರಿ ದಿವಾಕರ್ ನಂಜನಗೂಡಿನ ಕೃಷಿ ಇಲಾಖೆ ಅಧಿಕಾರಿ ರವಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.