ಕೆಇಎಯಿಂದ ಹಂಚಿಕೆಯಾಗಿದ್ದ 206 ಸೀಟುಗಳನ್ನು ರದ್ದು ಮಾಡಿದ ಅಭ್ಯರ್ಥಿಗಳು

ಬೆಂಗಳೂರು: ಅಖಿಲ ಭಾರತ ಮಟ್ಟದಲ್ಲಿನ ವೈದ್ಯಕೀಯ ಸೀಟು ಉಳಿಸಿಕೊಳ್ಳಲು ಇಚ್ಛಿಸಿರುವವರು ಸೇರಿದಂತೆ ಇತರ ಒಟ್ಟು 206 ಮಂದಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ತಮಗೆ ಹಂಚಿಕೆಯಾಗಿದ್ದ ಸೀಟುಗಳನ್ನು ಶುಕ್ರವಾರ ರದ್ದು ಮಾಡಿಕೊಂಡಿದ್ದಾರೆ.

ಇಷ್ಟೂ ಮಂದಿಯ ಸೀಟುಗಳನ್ನು ಮೆರಿಟ್ ಮೇಲೆ ಇತರ ಅರ್ಹರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವೈದ್ಯಕೀಯ ಕೋರ್ಸ್ ನಲ್ಲಿ ಅತಿ ಹೆಚ್ಚು‌, ಅಂದರೆ 107 ಮಂದಿ ತಮ್ಮ ಸೀಟುಗಳನ್ನು ರದ್ದುಪಡಿಸಿಕೊಂಡು, ಕೆಇಎಗೆ ವಾಪಸ್ ಮಾಡಿದ್ದಾರೆ.

ದಂತ ವೈದ್ಯಕೀಯದಲ್ಲಿ 20, ಆಯುಷ್ ಕೋರ್ಸ್‌ನಲ್ಲಿ 33, ಎಂಜಿನಿಯರಿಂಗ್‌ನಲ್ಲಿ 5 ಮತ್ತು ನರ್ಸಿಂಗ್‌ನಲ್ಲಿ 4 ಮಂದಿ ಸೀಟು ರದ್ದು ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಎರಡನೇ ಸುತ್ತಿನ ಸೀಟು ಹಂಚಿಕೆಗೆ ‘ರೀ ರನ್’ ಮಾಡಲು ಆರಂಭಿಸಿದ್ದು, ಅದರ ನಂತರ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *