ಕೆಟ್ಟ ಕಣ್ಣುಗಳಿಂದ ಅಲ್ಲಾ ನಿನ್ನನ್ನು ಕಾಪಾಡಲಿ; ಸಾನಿಯಾ ಪೋಸ್ಟ್‌ಗೆ ತಾಯಿ ಪ್ರತಿಕ್ರಿಯೆ

ನವದೆಹಲಿ: ಭಾರತದ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಇತ್ತೀಚೆಗೆ ಪಾಕಿಸ್ತಾನದ ಕ್ರಿಕೆಟಿಗ ಶೋಯೇಬ್‌ ಮಲ್ಲಿಕ್‌ನಿಂದ ವಿಚ್ಛೇದನ ಪಡೆದಿದ್ದರು. ಈ ಬಗ್ಗೆ ಅವರ ತಾಯಿ ನಸೀಮಾ ಮಿರ್ಜಾ ಕಳವಳ ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ಸಾನಿಯಾ ಮಿರ್ಜಾ ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದ ಕೆಲ ಫೋಟೋಗಳಿಗೆ ಪ್ರತಿಕ್ರಿಯಿಸಿದ ಅವರ ತಾಯಿ, ಅಲ್ಲಾ ನನ್ನ ಮಗಳನ್ನು ಕೆಟ್ಟ ಕಣ್ಣುಗಳಿಂದ ಕಾಪಾಡಲಿ ಎಂದು ಬರೆದಿದ್ದರು. ಅವರ ಈ ಕಾಮೆಂಟ್‌ ವೈರಲ್‌ ಆಗಿತ್ತು.

೨೦೧೦ರಲ್ಲಿ ಶೋಯೇಬ್‌ ಮಲ್ಲಿಕ್‌ನನ್ನು ವಿವಾಹವಾಗಿದ್ದ ಸಾನಿಯಾ, ಇತ್ತೀಚೆಗೆ ಅವರಿಂದ ವಿಚ್ಛೇದನ ಪಡೆದು ತಮ್ಮ ಮಗ ಇಜಾನ್‌ ಮಿರ್ಜಾ ಮಲ್ಲಿಕ್‌ನೊಂದಿಗಿದ್ದರೆ, ಅತ್ತ ಅವರ ಮಾಜಿ ಪತಿ ಪಾಕಿಸ್ತಾನದ ನಟಿಯ ಸನಾ ಜಾವೇದ್‌ರನ್ನು ಮದುವೆಯಾಗಿದ್ದಾರೆ.

Font Awesome Icons

Leave a Reply

Your email address will not be published. Required fields are marked *