ಕೆ.ಎಚ್. ಶಂಕರ್ ಆಗ್ರಹ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಉಡುಪಿ: ಉಡುಪಿ ಜಿಲ್ಲಾ ಕಿವುಡರ ಕ್ಷೇಮಾಭಿವೃದ್ಧಿ ಸಂಘದ 10ನೇ ವರ್ಷದ ಸಂಭ್ರಮ ಕಾರ್ಯಕ್ರಮ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಇಂದು ನಡೆಯಿತು. ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಎಚ್. ಶಂಕರ್ ಮಾತನಾಡಿ, ಸರಕಾರವು ಪ್ರಸ್ತುತ ಅಂಗವಿಕಲರಿಗೆ ನೀಡುತ್ತಿರುವ 1400 ರೂ. ಪಿಂಚಣಿ ಯಾವುದಕ್ಕೂ ಸಾಲುವುದಿಲ್ಲ. ಈ ಮೊತ್ತದಲ್ಲಿ ಮೂಲಭೂತ ಸೌಲಭ್ಯಗಳನ್ನು ಪೂರೈಸಿಕೊಳ್ಳಲು ಅಸಾಧ್ಯ.

ಈ ವಿಶೇಷ ಮಕ್ಕಳು ಜನಸಾಮಾನ್ಯರಂತೆ ಬದುಕಲು‌ ಆಗಲ್ಲ. ಇಂತಹ ಮಕ್ಕಳಿಗೆ ಸರಕಾರಿ ಕೆಲಸದಲ್ಲೂ ಸರಿಯಾದ ಮೀಸಲಾತಿ ದೊರಕುತ್ತಿಲ್ಲ. ಹೀಗಾಗಿ ಅಂಗವಿಕಲರಿಗೆ ನೀಡುತ್ತಿರುವ ಪಿಂಚಣಿಯನ್ನು 10 ಸಾವಿರ ರೂ.ಗಳಿಗೆ ಏರಿಸಬೇಕು ಎಂದು ಆಗ್ರಹಿಸಿದರು.

ಉಡುಪಿ ಮದರ್ ಆಫ್ ಸೊರೊಸ್ ಚರ್ಚ್ ನ ಧರ್ಮಗುರು ಚಾರ್ಲ್ಸ್ ಮೆನೇಜಸ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ ಸುವರ್ಣ, ನವದೆಹಲಿ ಅಖಿಲ ಭಾರತ ಕಿವುಡರ ಕ್ರೀಡಾ ಮಂಡಳಿಯ ಅಧ್ಯಕ್ಷ ಕುಮಾರ್ ವಿ., ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘ ಕಡೂರು ಇದರ ಅಧ್ಯಕ್ಷ ಕೆ.ಎಸ್. ಉಮಾಶಂಕರ್, ಉಡುಪಿ ನಗರಸಭಾ ಸದಸ್ಯ ವಿಜಯ ಕೊಡವೂರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *