ಕೇಂದ್ರದಿಂದ ರಾಜಭವನ ದುರ್ಬಳಕೆ: ನಾನು ರಾಜೀನಾಮೆ ಕೊಡಲ್ಲ –  ಸಿಎಂ ಸಿದ್ದರಾಮಯ್ಯ ಮತ್ತೆ ಸ್ಪಷ್ಟನೆ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್





ಮೈಸೂರು,ಸೆಪ್ಟಂಬರ್,27,2024 (www.justkannada.in):  ಕೇಂದ್ರ ಸರ್ಕಾರದಿಂದ ರಾಜಭವನ ದುರ್ಬಳಕೆಯಾಗುತ್ತಿದೆ. ನನ್ನ ರಾಜೀನಾಮೆ ಕೇಳಲು ಬಿಜೆಪಿಗೆ ಯಾವ ನೈತಿಕತೆ ಇದೆ. ನಾನು ತಪ್ಪು ಮಾಡಿಲ್ಲ. ಹೀಗಾಗಿ ರಾಜೀನಾಮೆ ಕೊಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೆ ಸ್ಪಷ್ಟನೆ ನೀಡಿದರು.

ಮೈಸೂರು ಪ್ರವಾಸ ಹಿನ್ನೆಲೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯರಿಗೆ  ಕಾಂಗ್ರೆಸ್ ಮುಖಂಡರು, ನೂರಾರು ಕಾರ್ಯಕರ್ತರು ಸ್ವಾಗತ ಕೋರಿದರು.  ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ  ರಾಜ್ಯಪಾಲರು ಆಡಳಿತದಲ್ಲಿ ತಲೆ ಹಾಕಬಾರದು . ರಾಜ್ಯದ ಜನರು ನಮಗೆ 5 ವರ್ಷ  ಅಧಿಕಾರ  ನಡೆಸಿ ಅಭಿವೃದ್ದಿ ಮಾಡಿ ಎಂದು ಅವಕಾಶ ನೀಡಿದ್ದಾರೆ .ಕೇಂದ್ರ ಸರ್ಕಾರ ರಾಜಭವನವನ್ನ ಹಾಗೂ ಎಲ್ಲಾ ಕಡೆ ಸಿಬಿಐ ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ತಮ್ಮ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ನಾನು ಯಾಕೆ ರಾಜೀನಾಮೆ ಕೊಡಬೇಕು. ತಪ್ಪು ಮಾಡಿದ್ದರೇ ಮಾತ್ರ ರಾಜೀನಾಮೆ ಕೊಡಬೇಕು . ಗೋದ್ರಾ ಗಲಭೆ ಆಗಿದ್ದಾಗ ಮೋದಿ ರಾಜೀನಾಮೆ ನೀಡಿದ್ದರಾ ಎಫ್ ಐಆರ್ ಆಗಿ ಜಾಮೀನು ಪಡೆದಿರುವ ಹೆಚ್ಡಿಕೆ ಯಾಕೆ ರಾಜೀನಾಮೆ ಕೊಟ್ಟಿಲ್ಲ.  ನಾನು ತಪ್ಪು ಮಾಡಿಲ್ಲ. ರಾಜೀನಾಮೆ ಕೊಡಲ್ಲ.  ನನ್ನ ರಾಜೀನಾಮೆ ಕೇಳುವ ನೈತಿಕತೆ ಅವರಿಗಿದೆಯಾ ಎಂದು ಪ್ರಶ್ನಿಸಿದರು.

ನಾಣು ಕಾನೂನು ಹೋರಾಟ ಮುಂದುವರೆಸುತ್ತೇನೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಇಲ್ಲವೇ ಇಲ್ಲ  ರಾಜ್ಯಪಾಲರ ಯಾವ ಪತ್ರಗಳಿಗೂ  ಸಿಎಸ್ ಉತ್ತರಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

Key words: not resign , CM Siddaramaiah, mysore






Previous articleMYSORE TRAFFIC: ರಸ್ತೆ ಸುರಕ್ಷತೆ ಹಾಳುಮಾಡುತ್ತಿರುವ ಅವೈಜ್ಞಾನಿಕ ಜಾಹಿರಾತು ಫಲಕ.


Font Awesome Icons

Leave a Reply

Your email address will not be published. Required fields are marked *