ನವದೆಹಲಿ: ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದಕ್ಕೆ ಖಾನ್, ರಸ್ತೆಯಲ್ಲಿ ಕುಳಿತು ರಾಜ್ಯ ಸರ್ಕಾರ, ಪೊಲೀಸ್ ವ್ಯವಸ್ಥೆ ವಿರುದ್ಧ ಪ್ರತಿಭಟಿಸಿದ್ದರು. ಈ ಹಿನ್ನಲೆಯಲ್ಲಿ ಆರಿಫ್ ಮೊಹಮ್ಮದ್ ಖಾನ್ ಮತ್ತು ಅವರ ನಿವಾಸಕ್ಕೆ ಸಿಆರ್ಪಿಎಫ್ ಪಡೆಗಳ ಝಡ್ + ಭದ್ರತೆಯನ್ನು ಒದಗಿಸಲು ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಕೇರಳ ರಾಜಭವನಕ್ಕೆ ತಿಳಿಸಿದೆ.
ಇದಕ್ಕೂ ಮುನ್ನ ಶನಿವಾರ, ರಾಜ್ಯಪಾಲ ಖಾನ್ ತಮ್ಮ ವಾಹನದಿಂದ ಇಳಿದು ರಸ್ತೆ ಬದಿಯ ಅಂಗಡಿಯ ಮುಂದೆ ಕುಳಿತು ಕೊಲ್ಲಂ ಜಿಲ್ಲೆಯ ನೀಲಮೇಲ್ನಲ್ಲಿ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರನ್ನ ಬಂಧಿಸುವಂತೆ ಒತ್ತಾಯಿಸಿದರು.
ಆಡಳಿತಾರೂಢ ಸಿಪಿಐ (ಎಂ) ನ ವಿದ್ಯಾರ್ಥಿ ಘಟಕ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ ಹಲವಾರು ಕಾರ್ಯಕರ್ತರು ರಾಜ್ಯಪಾಲರು ಸಮಾರಂಭಕ್ಕಾಗಿ ಹತ್ತಿರದ ಕೊಟ್ಟಾರಕ್ಕರಕ್ಕೆ ತೆರಳುತ್ತಿದ್ದಾಗ ಅವರ ವಿರುದ್ಧ ಕಪ್ಪು ಬಾವುಟ ಪ್ರತಿಭಟನೆ ನಡೆಸಿದರು.
Union Home Ministry has informed Kerala Raj Bhavan that Z+ Security cover of CRPF is being extended to Hon’ble Governor and Kerala Raj Bhavan :PRO,KeralaRajBhavan
— Kerala Governor (@KeralaGovernor) January 27, 2024