ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕೆ ಕೋಟ್ಯಂತರ ಮಂದಿ ದೇಣಿಗೆ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿರುವ ‘ಹನುಮಾನ್’ ತಂಡ ಸಿನಿಮಾ ಬಿಡುಗಡೆಗೆ ಮುನ್ನವೇ ರಾಮ ಮಂದಿರಕ್ಕೆ ದೇಣಿಗೆ ನೀಡುವುದಾಗಿ ಘೋಷಿಸಿತ್ತು, ಅಂತೆಯೇ ಚಿತ್ರತಂಡ ದೇಣಿಗೆ ನೀಡಿದೆ.
ಮಾರಾಟವಾಗುವ ಪ್ರತಿ ಟಿಕೆಟ್ನ ಐದು ರೂಪಾಯಿ ಮೊತ್ತವನ್ನು ರಾಮ ಮಂದಿರಕ್ಕೆ ದೇಣಿಗೆ ನೀಡುವುದಾಗಿ ಚಿತ್ರತಂಡ ಮೊದಲೇ ಘೋಷಿಸಿತ್ತು.
ಅಂತೆಯೇ ಈವರೆಗೆ 53.28 ಲಕ್ಷ ಟಿಕೆಟ್ಗಳನ್ನು ಚಿತ್ರತಂಡ ಮಾರಾಟ ಮಾಡಿದ್ದು ಪ್ರತಿ ಟಿಕೆಟ್ಗೆ ಐದು ರೂಪಾಯಿಯಂತೆ 2.66 ಕೋಟಿ ರೂಪಾಯಿ ಮೊತ್ತವನ್ನು ಚಿತ್ರತಂಡ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದೆ.
‘ಹನುಮಾನ್’ ಚಿತ್ರತಂಡ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ 14.85 ಲಕ್ಷ ರೂಪಾಯಿ ಹಣವನ್ನು ಚಿತ್ರತಂಡ ದೇಣಿಗೆ ನೀಡಿತ್ತು.
ಇದು ಪ್ರೀಮಿಯರ್ ಶೋನ ಟಿಕೆಟ್ ಮಾರಾಟದಿಂದ ಒಟ್ಟಾಗಿದ್ದ ಹಣದ ಭಾಗವಾಗಿತ್ತು. ಈಗ ಮತ್ತೆ 2.66 ಕೋಟಿ ರೂಪಾಯಿ ಮೊತ್ತವನ್ನು ದೇಣಿಗೆ ನೀಡಿದೆ. ಆ ಮೂಲಕ ಕೊಟ್ಟ ಮಾತನ್ನು ಚಿತ್ರತಂಡ ಉಳಿಸಿಕೊಂಡಿದೆ.