ಕೊಲ್ಕತ್ತಾದಲ್ಲಿ ಚಿಕಿತ್ಸೆ ಕೊರತೆಯಿಂದ ಸಾವನ್ನಪ್ಪಿದ 29 ಕುಟುಂಬಗಳಿಗೆ 2 ಲಕ್ಷ ಪರಿಹಾರ!

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಿರಿಯ ವೈದ್ಯರ ಮುಷ್ಕರದ ಸಂದರ್ಭದಲ್ಲಿ ಚಿಕಿತ್ಸೆ ಕೊರತೆಯಿಂದ ಸಾವನ್ನಪ್ಪಿದ 29 ಜನರ ಕುಟುಂಬಗಳಿಗೆ ರಾಜ್ಯ ಸರ್ಕಾರ 2 ಲಕ್ಷ ಪರಿಹಾರವನ್ನು ನೀಡಲಿದೆ ಎಂದು ಘೋಷಿಸಿದರು.

ಈ ಸಂಬಂಧ ಎಕ್ಸ್‌ನಲ್ಲಿ ಬರೆದುಕೊಂಡ ಅವರು, ಕಿರಿಯ ವೈದ್ಯರ ದೀರ್ಘಕಾಲದ ಕೆಲಸವನ್ನು ನಿಲ್ಲಿಸಿದ್ದರಿಂದ ಆರೋಗ್ಯ ಸೇವೆಗಳಲ್ಲಿನ ಅಡಚಣೆಯಿಂದಾಗಿ ನಾವು 29 ಅಮೂಲ್ಯ ಜೀವಗಳನ್ನ ಕಳೆದುಕೊಂಡಿರುವುದು ದುಃಖಕರ ಮತ್ತು ದುರದೃಷ್ಟಕರ ಎಂದಿದ್ದಾರೆ.

ದುಃಖಿತ ಕುಟುಂಬಗಳಿಗೆ ಸಹಾಯ ಹಸ್ತವನ್ನು ಚಾಚುವ ಸಲುವಾಗಿ, ರಾಜ್ಯ ಸರ್ಕಾರವು ಮೃತ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ತಲಾ 2 ಲಕ್ಷ ರೂ.ಗಳ ಸಾಂಕೇತಿಕ ಆರ್ಥಿಕ ಪರಿಹಾರವನ್ನ ಘೋಷಿಸುತ್ತದೆ ಎಂದು ದೀದಿ ಬರೆದುಕೊಂಡಿದ್ದಾರೆ. ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯರ ಶವ ಪತ್ತೆಯಾದ ದಿನವಾದ ಆಗಸ್ಟ್ 9 ರಿಂದ ಕಿರಿಯ ವೈದ್ಯರು ನಿರಂತರವಾಗಿ ಮುಷ್ಕರ ನಡೆಸುತ್ತಿದ್ದಾರೆ.

https://x.com/MamataOfficial/status/1834555275698696620?

Font Awesome Icons

Leave a Reply

Your email address will not be published. Required fields are marked *