ಗೋವಾ: 54ನೇ ಸಾಲಿನ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗೋವಾದಲ್ಲಿ ಆರಂಭ ಆಗಿದೆ. ಸೋಮವಾರ ಪಣಜಿಯಲ್ಲಿರುವ ಡಾಕ್ಟರ್ ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸಿನಿಮೋತ್ಸವಕ್ಕೆ ಚಾಲನೆ ದೊರೆಯಿತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು 9 ದಿನಗಳ ಸಿನಿಮೋತ್ಸವಕ್ಕೆ ಚಾಲನೆ ನೀಡಿದರು. ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಸಚಿವ ಡಾಕ್ಟರ್ ಎಲ್. ಮುರುಗನ್, ನಟ ಹಾಗೂ ಸಂಸದ ಸನ್ನಿ ಡಿಯೋಲ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
‘54ನೇ ಫಿಲ್ಮ್ ಫೆಸ್ಟಿವಲ್ ವೈವಿಧ್ಯ ಧ್ವನಿ, ಹಲವು ಸಂಸ್ಕೃತಿ, ವೈವಿಧ್ಯತೆ ಮತ್ತು ಸಂಪೂರ್ಣ ಸಿನಿಮೀಯ ಶ್ರೇಷ್ಠತೆಯ ಸಮ್ಮಿಳನವಾಗಿದೆ. ಈ ವರ್ಷ 270 ಸಿನಿಮಾಗಳು ಪ್ರದರ್ಶನ ಆಗಲಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಸಿನಿಮಾ ಸಂಖ್ಯೆ ಹೆಚ್ಚಿಸಲಾಗಿದೆ’ ಎಂದು ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ಭಾರತದಲ್ಲಿ ನಿರ್ಮಾಣ ಆಗುವ ವಿದೇಶಿ ಸಿನಿಮಾಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ ಅನುರಾಗ್ ಸಿಂಗ್ ಠಾಕೂರ್. ‘ಭಾರತದಲ್ಲಿ ವಿದೇಶಿ ಭಾಷೆಯ ಸಿನಿಮಾ ನಿರ್ಮಾಣ ಮಾಡಿದರೆ ಒಟ್ಟು ಬಜೆಟ್ನ ಶೇ.40 ಹಣವನ್ನು ಸರ್ಕಾರ ಮರುಪಾವತಿ ಮಾಡಲಿದೆ. ಇದರ ಗರಿಷ್ಟ ಮಿತಿ 30 ಕೋಟಿ ರೂಪಾಯಿ ಆಗಿದೆ. ಈ ಮೊದಲು ಇದರ ಮಿತಿ 2.5 ಕೋಟಿ ರೂಪಾಯಿ ಇತ್ತು’ ಎಂದು ಅನುರಾಗ್ ಸಿಂಗ್ ಹೇಳಿದ್ದಾರೆ.
An icon across the ages, @MadhuriDixit has graced our screens with unparalleled talent for four incredible decades.
From the effervescent Nisha to the captivating Chandramukhi, the majestic Begum Para to the indomitable Rajjo, her versatility knows no bounds.
Today, we are… pic.twitter.com/HlYUWHsWRY
— Anurag Thakur (@ianuragthakur) November 20, 2023