ಗ್ರಾಮಗಳಲ್ಲಿ ಹುಲಿ ಪ್ರತ್ಯಕ್ಷ : ಅರಣ್ಯಾಧಿಕಾರಿಗಳ ಕಾರ್ಯಾಚರಣೆ: ಎಚ್ಚರಿಕೆ ಸಂದೇಶ ರವಾನೆ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ಡಿಸೆಂಬರ್,4,2024 (www.justkannada.in):  ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಭೀತಿ ಮುಂದುವರೆದಿದ್ದು, ಹೆಚ್.ಡಿ.ಕೋಟೆ ತಾಲ್ಲೂಕಿನ ಶಾಂತಿಪುರ, ಬೋಚಿಕಟ್ಟೆ ಚಾಕಹಳ್ಳಿ ಗ್ರಾಮಗಳಲ್ಲಿ ಹುಲಿ ಪ್ರತ್ಯಕ್ಷವಾಗಿದೆ.

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿಯು ಚಿರತೆ ಕಾರ್ಯಪಡೆಯೊಂದಿಗೆ ಹುಲಿ ಸೆರೆ ಹಿಡಿಯುವ ಕಾರ್ಯಚರಣೆ ತೊಡಗಿದ್ದಾರೆ.

ಶಾಂತಿಪುರ, ಬೋಚಿಕಟ್ಟೆ ಗ್ರಾಮದ ಬಳಿ ಹುಲಿ ಓಡಾಟದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕೂಂಬಿಂಗ್ ಕಾರ್ಯಚರಣೆ ವೇಳೆ ಹಳೆ ಹೆಜ್ಜೆ ಗುರುತುಗಳು ಪತ್ತೆಯಾಗಿದೆ.  ಚಾಕಹಳ್ಳಿ ಗ್ರಾಮದಲ್ಲಿ ಹುಲಿ ಮರಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ  ನೀಡಿದ್ದು, ಸದರಿ ಹುಲಿಯನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಡೆಗೆ ಹಿಮ್ಮೆಟ್ಟಿಸಲಾಗಿದೆ.

ಈ ಗ್ರಾಮಗಳಲ್ಲಿ ತಾಯಿ ಹಾಗೂ 02 ಮರಿಗಳು ಓಡಾಡುತ್ತಿದ್ದು, ಹುಲಿರಾಯ ಪದೇ ಪದೇ ತನ್ನ ಜಾಗವನ್ನು ತನ್ನ ಮರಿಗಳೊಂದಿಗೆ ಬದಲಾಯಿಸುತ್ತಿದ್ದಾನೆ. ಹೀಗಾಗಿ  ಮುಂಜಾಗ್ರತಾ ಕ್ರಮವಾಗಿ ಹುಲಿ ಇರುವಿಕೆ ಖಚಿತಗೊಂಡಿರುವ ಸ್ಥಳಗಳಲ್ಲಿ Wildlife Advance Alert System (WAAS) ಮೂಲಕ ತುರ್ತು ಸಂದೇಶವನ್ನ ಗ್ರಾಮಗಳ ಜನತೆಗೆ  ರವಾನೆ ಮಾಡಿದ್ದು ಎಚ್ಚರಿಕೆ ನೀಡಿದ್ದಾರೆ.

ಹುಲಿ ಸೆರೆ ಕಾರ್ಯಾಚರಣೆಗೆ ಸ್ಥಳದಲ್ಲಿ ಹುಲಿ ಚಲನ-ವಲನ ಪತ್ತೆಗೆ ಟ್ರ್ಯಾಪ್ ಕ್ಯಾಮರಾಗಳು ನೆಟ್ ವರ್ಕ್ ಕ್ಯಾಮರಾಗಳು ಡ್ರೋನ್ ಕ್ಯಾಮರಾ ಬಳಕೆ ಮಾಡಲಾಗಿದ್ದು, ಸಾರ್ವಜನಿಕರು ಹುಲಿ ಚಲನವಲನ ಕಂಡಲ್ಲಿ ಕೂಡಲೇ ಸಹಾಯವಾಣಿಗೆ ಕರೆ ಮಾಡಲು ಮನವಿ ಮಾಡಿದ್ದಾರೆ.

9481990926 ಅಥವಾ 1926ಗೆ ಕರೆ ಮಾಡಿ ಮಾಹಿತಿ ನೀಡಲು‌ ಮಾಹಿತಿ ತಿಳಿಸಿದ್ದು  ಹುಲಿ ಕುರಿತಂತೆ ಯಾವುದೇ ಸುಳ್ಳು ಸುದ್ದಿ ವದಂತಿ ಹಬ್ಬಿಸದಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಪೋಟೋ ವಿಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡದಂತೆ ಎಚ್ಚರಿಕೆ ನೀಡಲಾಗಿದೆ.

Key words: Tiger, villages, Forest officials, operation

Font Awesome Icons

Leave a Reply

Your email address will not be published. Required fields are marked *