ಚಾಮರಾಜನಗರ: ಹುಲಿಯೊಂದು ಮುಳ್ಳುಹಂದಿ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.
ಮೇಲ್ನೋಟಕ್ಕೆ ಇದು ಅಚ್ಚರಿಯಾಗಿ ಕಾಣಬಹುದು. ಸಾಮಾನ್ಯವಾಗಿ ಇತರೆ ಪ್ರಾಣಿಗಳ ಮೇಲೆ ದಾಳಿ ನಡೆಸಿ ಸಾಯಿಸುವ ಹುಲಿ ಇಲ್ಲಿ ಮುಳ್ಳುಹಂದಿಗೆ ಬಲಿಯಾಗಿರುವುದು ಅಚ್ಚರಿ ಮೂಡಿಸಬಹುದು. ಆದರೆ ಇಲ್ಲಿ ಹುಲಿ ಹಾಗೂ ಮುಳ್ಳುಹಂದಿ ನಡುವೆ ಭಾರೀ ಕಾದಾಟ ನಡೆದಿದ್ದು ಈ ವೇಳೆ ಮುಳ್ಳುಹಂದಿಯ ಮುಳ್ಳುಗಳು ಚುಚ್ಚಿ ಸಾವನ್ನಪ್ಪಿದೆ
ಬಂಡೀಪುರದ ಮದ್ದೂರು ವಲಯದ ಸೀಗನಬೆಟ್ಟದ ಸರ್ಕಲ್ ರಸ್ತೆಯ ಘಟನೆ ನಡೆದಿದ್ದು, ನಾಲ್ಕು ವರ್ಷದ ಗಂಡು ಹುಲಿಯ ಕಳೇಬರ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಹುಲಿಯ ಹೊಟ್ಟೆ ಒಳಭಾಗದಲ್ಲಿ ಮುಳ್ಳುಹಂದಿಯ ಮುಳ್ಳು ಚುಚ್ಚಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪಶು ವೈದ್ಯ ಡಾ.ಮಿರ್ಜಾ ವಸೀಂ ಮಾಹಿತಿ ನೀಡಿದ್ದಾರೆ.
ಈ ವೇಳೆ ಸ್ಥಳದಲ್ಲಿ ಅರಣ್ಯಾಧಿಕಾರಿ ಡಾ. ರಮೇಶ್ ಕುಮಾರ್, ಎಸಿಎಫ್ ರವೀಂದ್ರ ಆರ್ ಎಫ್ ಓ ಮಲ್ಲೇಶ್, ಎನ್ ಟಿ, ಸಿ ಎ ಪ್ರತಿನಿಧಿಗಳಾದ ರಘುರಾಂ, ಕು.ಕೃತಿಕಾ ಹಾಗೂ ಸಿಬ್ಬಂದಿ ಇದ್ದರು.