ಚಾಮರಾಜನಗರ, ನ.19,2024: (www.justkannada.in news) ಹನೂರು ಪಟ್ಟಣ, ದೊಡ್ಡಿಂದುವಾಡಿ, ಗುಂಡೇಗಾಲ, ಕೊಳ್ಳೇಗಾಲ ಪಟ್ಟಣ, ಚಾಮರಾಜನಗರ ಪಟ್ಟಣ, ಗುಂಡ್ಲುಪೇಟೆ ಮತ್ತು ಬೇಗೂರು ಕಡೆಗಳಲ್ಲಿ ಕಳ್ಳತನ ಮಾಡಿದ ಆರೋಪಿಗಳ ಬಂಧನ.
ಚಾಮರಾಜನಗರ ಜಿಲ್ಲೆಯ ಒಟ್ಟು 13 ಹಾಗೂ ಕೋಲಾರ ಜಿಲ್ಲೆಯ ಒಂದು ಕಳುವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಪತ್ತೆ.
23-10-2024 ರಂದು ಹನೂರು ಪಟ್ಟಣದ ಆಶ್ರಯ ಬಡಾವಣೆಯ ನಿವಾಸಿ ಶಾಬೀರ್ ಅಹಮ್ಮದ್ ಠಾಣೆಗೆ ಹಾಜರಾಗಿ ನೀಡಿದ್ದ ದೂರಿನಲ್ಲಿ, ತಾನು 18.10.2024 ರಂದು ಸಂಜೆ 05.30 ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ಸಂಬಂದಿಕರ ಮದುವೆಗೆ ಹೋಗಿ ವಾಪಸ್ ಬಂದಾಗ ಯಾರೋ ಕಳ್ಳರು ಮನೆ ಬಾಗಿಲನ್ನು ಮೀಟಿ ಮನೆ ಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ 11 ಲಕ್ಷ ಬೆಲೆ ಬಾಳುವ ಚಿನ್ನ, ಬೆಳ್ಳಿ ಆಭರಣಗಳು ಮತ್ತು 20 ಸಾವಿರ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದಿದ್ದರು.
ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆಗಾಗಿ ಚಾಮರಾಜನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಡಾ. ಕವಿತಾ. ಬಿ., ಎಂ. ಶಿವಮಾದಯ್ಯ, ಸಿ.ಪಿ.ಐ. (ಪ್ರಭಾರ, ಹನೂರು ಠಾಣೆ) ರವರ ನೇತೃತ್ವದಲ್ಲಿ ತಂಡ ರಚಿಸಲಾಯಿತು.
ಈ ತಂಡದಲ್ಲಿ ಮಂಜುನಾಥ್ ಪ್ರಸಾದ್, ಪಿ.ಎಸ್.ಐ. ಹನೂರು ಠಾಣೆ, ಹಾಗೂ ಪೊಲೀಸ್ ಉಪಾಧೀಕ್ಷಕರ ಅಪರಾಧ ಪತ್ತೆ ದಳ ಸಿಬ್ಬಂದಿಗಳಾದ ತಕೀವುಲ್ಲಾ, ಎ.ಎಸ್.ಐ. ರವಿ, , ಕಿಶೋರ್, ಬಿಳಿಗೌಡ, ಶಿವಕುಮಾರ್ ಲಿಯಾಖಾತ್ ಆಲಿ ಖಾನ್, ವೆಂಕಟೇಶ್ ಹಾಗೂ ಹನೂರು ಠಾಣೆಯ ಸಿಬ್ಬಂದಿಗಳಾದ ಚಂದ್ರ, ರಾಮಕೃಷ್ಣ ವಿಶ್ವನಾಥ ತೆರಕಣಾಂಬಿ ಠಾಣೆಯ ಜಿ.ಎನ್. ಪುಟ್ಟರಾಜು, ಮತ್ತು ಚಾಲಕರಾದ ಸೋಮಶೇಖರ್ ಮತ್ತು ಶಿವಕುಮಾರ್ ರವರನ್ನೊಳಗೊಂಡ 02 ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಲಕ್ಷ್ಮಯ್ಯ ಡಿ.ಎಸ್.ಪಿ. ಚಾಮರಾಜನಗರ ಉಪ ವಿಭಾಗ ಹಾಗೂ ಧರ್ಮೇಂದ್ರ, ಎಂ. ಡಿ.ಎಸ್.ಪಿ. ಕೊಳ್ಳೇಗಾಲ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ 02 ತಂಡಗಳನ್ನು ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯದ ವಿವಿಧ ಭಾಗಗಳಿಗೆ ಆರೋಪಿ ಮತ್ತು ಮಾಲು ಪತ್ತೆಗೆ ಕಳುಹಿಸಲಾಗಿತ್ತು.
ಸದರಿ ತಂಡಗಳು ಹೊರ ರಾಜ್ಯದ ವಿವಿಧ ಕಡೆ ಭೇಟಿ ನೀಡಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿಗಳು ಮತ್ತೆ ಕಳ್ಳತನ ಮಾಡಲು ಹಾಗೂ ಕಳುವು ಮಾಲುಗಳನ್ನು ಮಾರಾಟ ಮಾಡಲು ಮ.ಮ. ಬೆಟ್ಟ ಮತ್ತು ಕೊಳ್ಳೇಗಾಲಕ್ಕೆ ಬಂದಿದ್ದ ವೇಳೆ ಈ 4 ಜನ ಆರೋಪಿಗಳನ್ನು ವಶಕ್ಕೆ ಪಡೆದರು.
- ಕೊಡಂಗುಸ್ವಾಮಿ ಬಿನ್ ಲೇಟ್ ಮಾಡಸ್ವಾಮಿ ದೇವರು, 58 ವರ್ಷ, ಗುಜರಿ ಕೆಲಸ, ಮನೆ ನಂ 245, ತೆರ್ಕುಪನಾವಡಿ ಗ್ರಾಮ. ಪನಾವಡಲಿ ಸತ್ತರಂ, ಪೋಸ್ಟ್, ಶಂಕರ್ ಕೋಯಿಲ್ ತಾಲ್ಲೂಕು. ತೆಂಕಾಶಿ ಜಿಲ್ಲೆ. ತಮಿಳುನಾಡು ರಾಜ್ಯ.
- ಜೇಸುದಾಸ್.ಡಿ @ ಯೇಸುದಾಸ್ @ ಶಂಸುದ್ದೀನ್ ಬಿನ್ ಲೇಟ್ ಧರ್ಮರಾಜ್, 39 ವರ್ಷ, ಸೆಂಟ್ರಿಂಗ್ ಕೆಲಸ, ಪಾಂಬು ಪಾರೈ ಗ್ರಾಮ, ಪುದುಚೇರಿ ಈಸ್ಟ್, ವಾಲೇಯಾರ್ ಡ್ಯಾಂ ಪೋಸ್ಟ್, ಪಾಲಕ್ಕಡ್ ಜಿಲ್ಲೆ, ಕೇರಳ ರಾಜ್ಯ.
- ಇಂದಿರರಾಜ್ @ ಇಂದ್ರರಾಜ್ ಬಿನ್ ಪಂಡರಿನಾದನ್, 35 ವರ್ಷ, ಡ್ರೈವರ್ ಕೆಲಸ, ಮನೆ ನಂ 2/248(ಬಿ), ಕಂದಸ್ವಾಮಿ ಶೆಟ್ಟಿಯೂರ್ ಕಾಲೋನಿ, ಕಂಜಾಮ್ ಪಟ್ಟಿ ಪೋಸ್ಟ್, ಪೊಲ್ಲಾಚಿ ತಾಲ್ಲೂಕು ಕೊಯಮತ್ತೂರು ಜಿಲ್ಲೆ.
- ಅಜಿತ್ ಬಿನ್ ಅಣ್ಣಪ್ಪ, 23 ವರ್ಷ, ಅದ್ರೆ ಪಕ್ಕ ಅಂಗಡಳ್ಳ ಗ್ರಾಮ, ಹಾಸನ ತಾಲ್ಲೂಕು ಜಿಲ್ಲೆ, ಹಾಲಿ ವಾಸ ಮಂಜೇರಿ, ಕೇರಳ ರಾಜ್ಯ.
ಮೇಲ್ಕಂಡ 04 ಜನ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಈವರು ಹನೂರು ಪಟ್ಟಣ ದೊಡ್ಡಿಂದುವಾಡಿ, ಗುಂಡೇಗಾಲ, ಕೊಳ್ಳೇಗಾಲ ಪಟ್ಟಣ, ಚಾಮರಾಜನಗರ ಪಟ್ಟಣ, ಗುಂಡ್ಲುಪೇಟೆ ಮತ್ತು ಬೇಗೂರು ಕಡೆಗಳಲ್ಲಿ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಕಂಡು ಬಂದಿದ್ದು, ಚಾಮರಾಜನಗರ ಜಿಲ್ಲೆಯ ಒಟ್ಟು 13 ಹಾಗೂ ಕೋಲಾರ ಜಿಲ್ಲೆಯ ಒಂದು ಕಳುವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿರುತ್ತದೆ.
ಆರೋಪಿಗಳಿದ್ದ ಈ ಕೆಳಕಂಡ ಮಾಲುಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ.
- ಒಟ್ಟು 41,69,000-00 ಬೆಲೆ ಬಾಳುವ 504.16 ಗ್ರಾಂ ಚಿನ್ನಾಭರಣಗಳು.
- 3 ಕೆ.ಜಿ. ಬೆಳ್ಳಿ ಆಭರಣಗಳ
- ರೂ 4400/- ನಗದು ಹಣ
- ಕೃತ್ಯಕ್ಕೆ ಬಳಕೆ ಮಾಡಿದ್ದ ನಂ ಟಿ.ಎನ್-38, ಸಿ.ಎಫ್-4891 ಮಹೀಂದ್ರ ಕಾರು ಹಾಗೂ ನಂ ಕೆಎ-02 ಕೆ.ಎಲ್-3133 ಸ್ಟ್ರೇಂಡರ್ ಮೋಟಾರ್ ಬೈಕ್ನ್ನು ವಶಕ್ಕೆ ಪಡೆಯಲಾಗಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಹಾಗೂ ಪ್ರಕರಣ ಪತ್ತೆಯಲ್ಲಿ ಸಹಕರಿಸಿದ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗ, ಬೆರಳಚ್ಚು ವಿಭಾಗ ಮತ್ತು ನಿಸ್ತಂತು ವಿಭಾಗದವರನ್ನು ಪೊಲೀಸ್ ಅಧೀಕ್ಷಕರು, ಚಾಮರಾಜನಗರ ಜಿಲ್ಲೆ ರವರು ಪ್ರಸಂಶಿಸಿ ನಗದು ಬಹುಮಾನ ಘೋಷಿಸಿರುತ್ತಾರೆ.
key words: Operation of Chamaraja Nagar Police, Notorious interstate thieves arrested,
SUMMARY:
Operation of Chamaraja Nagar Police: Notorious interstate thieves arrested, 504.16 grams of gold ornaments, 3 kg of silver ornaments seized.