ಚೆನ್ನೈ: ಇತ್ತೀಚೆಗೆ ಇಸ್ರೋ ಉಪಗ್ರಹ ಉಡಾವಣೆ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮದ ಜಾಹೀರಾತು ನೀಡುವ ವೇಳೆ ಇಸ್ರೋ ರಾಕೆಟ್ ಮೇಲೆ ಚೀನಾ ಧ್ವಜವಿರುವಂತಹ ಜಾಹೀರಾತು ನೀಡಿ ಎಡವಟ್ಟು ಮಾಡಿದ ತಮಿಳುನಾಡು ಸರ್ಕಾರಕ್ಕೆ ಅಲ್ಲಿನ ಬಿಜೆಪಿ ಅವರದೇ ರೀತಿಯಲ್ಲಿ ತಿರುಗೇಟು ನೀಡಿದೆ. ಇಂದು ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಹುಟ್ಟುಹಬ್ಬ, ಈ ಹಿನ್ನೆಲೆಯಲ್ಲಿ ಡಿಎಂಕೆ ಹಿರಿಯ ನಾಯಕನಿಗೆ ಬಿಜೆಪಿ ಮಂದಾರಿಯನ್ ಅಂದರೆ ಚೀನಾ ಭಾಷೆಯಲ್ಲಿ ವಿಶ್ ಮಾಡುವ ಮೂಲಕ ಕಾಲೆಳೆದಿದೆ.
ಹೌದು. . ತ.ನಾಡು ಬಿಜೆಪಿ ಪರವಾಗಿ ತಮಿಳುನಾಡಿನ ಗೌರವನ್ವಿತ ಸಿಎಂ ತಿರು ಎಂ.ಕೆ. ಸ್ಟಾಲಿನ್ ಅವರಿಗೆ ಅವರ ಇಷ್ಟದ ಭಾಷೆಯಲ್ಲಿ ಹುಟ್ಟುಹಬ್ಬದ ಶುಭಾಶಯಗಳು ಅವರಿಗೆ ದೀರ್ಘ ಆಯುಷ್ಯ ಆರೋಗ್ಯದಿಂದ ಬಾಳಲಿ ಎಂದು ಬರೆದು ವಿಶ್ ಮಾಡಿರುವ ತಮಿಳುನಾಡು ಬಿಜೆಪಿಯ ಟ್ವಿಟ್ಟರ್ ಪೇಜ್, ಕೆಳಗೆ ಸ್ಟಾಲಿನ್ ಫೋಟೋವನ್ನು ಹಾಕಿದ್ದಾರೆ.
ಅದರಲ್ಲಿ ಚೀನಾದ ಮಂದಾರಿಯನ್ ಭಾಷೆಯಲ್ಲಿ ಸಿಎಂ ಸ್ಟಾಲಿನ್ ಅವರಿಗೆ ವಿಶ್ ಮಾಡಲಾಗಿದೆ. ವೈರಲ್ ಆದ ಸ್ವಲ್ಪ ಹೊತ್ತಿನಲ್ಲೇ ಈ ಪೋಸ್ಟನ್ನು 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದರ ಜೊತೆ ಕೆಳಭಾಗದಲ್ಲಿ ಯಾರು ತಮಿಳುನಾಡು ಸಿಎಂ ಅವರಿಗೆ ಮಂದರಿಯನ್ ಭಾಷೆಯಲ್ಲಿ ವಿಶ್ ಮಾಡಲು ಬಯಸುವಿರೋ ಅವರೆಲ್ಲಾ ಸಿಎಂ ಅವರಿಗೆ ಈ ಕೆಳಗೆ ಇರುವ ಮಂದರಿಯನ್ ಭಾಷೆಯ ಶುಭಾಶಯವನ್ನು ಬಳಸಿಕೊಳ್ಳಿ ಎಂದು ಪೋಸ್ಟ್ ಮಾಡಿದೆ.
On behalf of @BJP4Tamilnadu, here’s wishing our Honourable CM Thiru @mkstalin avargal a happy birthday in his favourite language! May he live a long & healthy life! pic.twitter.com/2ZmPwzekF8
— BJP Tamilnadu (@BJP4TamilNadu) March 1, 2024