‘ಜವಾನ್’ ಸೂಪರ್‌ ಹಿಟ್‌ ಬಳಿಕ ʼಡಂಕಿ’ ಚಿತ್ರದ ಬಗ್ಗೆ ಶಾರುಖ್‌ ಹೇಳಿದ್ದೇನು?

ಮುಂಬೈ: ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಸಖತ್‌ ಹಿಟ್‌ ಆಗಿದೆ. ಅದೇ ರೀತಿ ಅವರ ಭವಿಷ್ಯದ ‘ಡಂಕಿ’ ಚಿತ್ರದ ಬಗ್ಗೆ ಇರುವ ನಿರೀಕ್ಷೆ ದ್ವಿಗುಣವಾಗಿದೆ. ಈ ಚಿತ್ರದಲ್ಲಿ ಏನೆಲ್ಲ ಇರಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಅಭಿಮಾನಿಗಳಿಂದ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ತಮ್ಮದೇ ಸ್ಟೈಲ್​ನಲ್ಲಿ ಶಾರುಖ್ ಉತ್ತರ ನೀಡಿದ್ದಾರೆ.

ಮಾಸ್, ಕ್ಲಾಸ್ ಎಲ್ಲಾ ಆಯ್ತು. ಡಂಕಿ ಸೀನಿಮಾದಲ್ಲಿ ಅಂಥದ್ದೇನಿರಲಿದೆ’ ಎಂದು ಅಭಿಮಾನಿಯೋರ್ವ ಕೇಳಿದ್ದಾನೆ. ಇದಕ್ಕೆ ಶಾರುಖ್ ಖಾನ್ ಅವರ ಉತ್ತರ ಸಖತ್ ಫನ್ನಿ ಆಗಿತ್ತು. ‘ಡಂಕಿ ಚಿತ್ರದಲ್ಲಿ ರಾಜ್​ಕುಮಾರ್ ಹಿರಾನಿ ಇದ್ದಾರೆ. ಮತ್ತಿನ್ನೇನು ಬೇಕು’ ಎಂದು ಶಾರುಖ್ ಕೇಳಿದ್ದಾರೆ.

ಶಾರುಖ್ ಖಾನ್ ಅವರ ಈ ಉತ್ತರವನ್ನು ಅನೇಕರು ಒಪ್ಪಿಕೊಂಡಿದ್ದಾರೆ. ರಾಜ್​ಕುಮಾರ್ ಹಿರಾನಿ ಅವರು ತಮ್ಮ ವೃತ್ತಿ ಜೀವನದಲ್ಲಿ ಆಗೊಂದು ಈಗೊಂದು ಸಿನಿಮಾ ಮಾಡುತ್ತಾರೆ. ಪ್ರತಿ ಚಿತ್ರಕ್ಕೆ ಅವರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಪರ್ಫೆಕ್ಟ್ ಸ್ಕ್ರಿಪ್ಟ್ ರೆಡಿ ಮಾಡಿ ಅಖಾಡಕ್ಕೆ ಇಳಿಯುತ್ತಾರೆ. ಅವರು ಸಿನಿಮಾ ಮಾಡಿದರೆ ಯಶಸ್ಸು ಖಚಿತ ಅನ್ನೋದು ಹಲವರ ಅಭಿಪ್ರಾಯ. ಇದು ಸಾಬೀತಾಗಿದೆ ಕೂಡ. ‘ಡಂಕಿ’ ಸಿನಿಮಾದಲ್ಲಿ ರೊಮ್ಯಾನ್ಸ್, ಕಾಮಿಡಿ, ಸೆಂಟಿಮೆಂಟ್ ಇರಲಿದೆ ಎಂದು ಈ ಮೊದಲು ರಾಜ್​ಕುಮಾರ್ ಹಿರಾನಿ ತಿಳಿಸಿದ್ದರು.

Font Awesome Icons

Leave a Reply

Your email address will not be published. Required fields are marked *