ಮೈಸೂರು, ಸೆಪ್ಟೆಂಬರ್ 01, 2023 (www.justkannada.in): ಮೈಸೂರಿನ ಅತ್ಯಂತ ಹಳೆಯ ಮತ್ತು ಅತ್ಯಂತ ವಿಶ್ವಾಸಾರ್ಹ ಟ್ಯಾಕ್ಸಿ ಸೇವೆ ನೀಡುತ್ತಿರುವ ಮೈಸೂರು ಟ್ಯಾಕ್ಸಿವಾಲಾ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಸಂಸ್ಥೆಯ ಸುಸ್ಥಿರತೆ ಮತ್ತು ವಿಸ್ತರಣೆ ನಿಟ್ಟಿನಲ್ಲಿ ಹೊಸ ಹೆಜ್ಜೆ ಇರಿಸಿದ್ದು, ಮಹತ್ವಾಕಾಂಕ್ಷೆಯ “ಗ್ರೀನ್ ಮೈಸೂರು ಪ್ರಾಜೆಕ್ಟ್” ಆರಂಭಿಸಲು ಯುಕೆ ಮೂಲದ ಫಿನ್ಟೆಕ್ ಸಂಸ್ಥೆ ಗಮನ ಸೆಳೆದು ಆರ್ಥಿಕ ನೆರವು ಪಡೆದಿದೆ. ಮೊದಲ ಹಂತದಲ್ಲಿ ಒಟ್ಟು 3.7 ಮಿಲಿಯನ್ ಯುಸ್ ಡಾಲರ್ ಸಂಗ್ರಹಿಸುವ ಗುರಿಯನ್ನು ಹೊಂದಿದೆ. 1.3 ಮಿಲಿಯನ್ ಯುಎಸ್ ಡಾಲರ್ ಆರಂಭಿಕ ಹೂಡಿಕೆಯೊಂದಿಗೆ ಕರ್ನಾಟಕದಾದ್ಯಂತ ಹಸಿರು ಮತ್ತು ಹೆಚ್ಚು ಸಂಪರ್ಕಿತ ಸಾರಿಗೆ ಜಾಲವನ್ನು ವಿಸ್ತರಿಸುವತ್ತಾ ಮೈಸೂರು ಟ್ಯಾಕ್ಸಿವಾಲಾ ಮುನ್ನಡೆದಿದೆ.
ಮೈಸೂರು ಟ್ಯಾಕ್ಸಿವಾಲಾ ಸಂಸ್ಥಾಪಕ ಚೇತನ್ ಕುಮಾರ್ ಅವರ ದೂರದೃಷ್ಟಿಯ ನಾಯಕತ್ವದಲ್ಲಿ “ಗ್ರೀನ್ ಮೈಸೂರು ಪ್ರಾಜೆಕ್ಟ್” ಸುಸ್ಥಿರ ಮತ್ತು ಪರಿಸರ ಸ್ನೇಹಿ ಸಾರಿಗೆ ಪರಿಸರ ವ್ಯವಸ್ಥೆಯನ್ನು ಕಲ್ಪಿಸಲಿದೆ. ಇದು ಪರಿಸರಕ್ಕೆ ಪೂರಕವಾಗಿ ಇರಲಿದ್ದು, ಸ್ಥಳೀಯ ಆರ್ಥಿಕತೆಯತ್ತಲೂ ಗಮನ ನೀಡುತ್ತದೆ. ಟ್ಯಾಕ್ಸಿ ಸೇವೆಗಳ ಸಮಗ್ರ ಜಾಲದ ಮೂಲಕ ಕರ್ನಾಟಕದಾದ್ಯಂತ 12 ನಗರಗಳನ್ನು ಸಂಪರ್ಕಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದರಿಂದಾಗಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಸಿರು ಪ್ರಯಾಣದ ಆಯ್ಕೆಗಳನ್ನು ಉತ್ತೇಜಿಸುತ್ತಾಗಲಿದೆ.
ಯುಕೆ ಮೂಲದ ಫಿನ್ಟೆಕ್ ಸಂಸ್ಥೆ ಮೈಸೂರು ಟ್ಯಾಕ್ಸಿವಾಲಾ ಮತ್ತು “ಗ್ರೀನ್ ಮೈಸೂರು ಪ್ರಾಜೆಕ್ಟ್” ಗೆ ಕೈಜೋಡಿಸಿದ್ದು, ಮೈಸೂರು ಮತ್ತು ಅದರ ನೆರೆಹೊರೆಯ ನಗರಗಳಲ್ಲಿ ತಡೆರಹಿತ ಮತ್ತು ಪರಿಣಾಮಕಾರಿ ಟ್ಯಾಕ್ಸಿ ಜಾಲವನ್ನು ಸ್ಥಾಪಿಸುವ ಗುರಿಯೊಂದಿಗೆ ಈ ಮಹತ್ವಾಕಾಂಕ್ಷೆಯ ಉಪಕ್ರಮಕ್ಕೆ ಅಡಿಪಾಯ ಹಾಕಲು ಅಗತ್ಯ ಬಂಡವಾಳವನ್ನು ಫಿನ್ ಟೆಕ್ ಸಂಸ್ಥೆ ನೀಡುತ್ತಿದೆ.
“ಹಸಿರು ಮೈಸೂರು ಯೋಜನೆ”ಯು ಸುಮಾರು 300 ನೇರ ಉದ್ಯೋಗಗಳು ಮತ್ತು ಹೆಚ್ಚುವರಿ 600 ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಈ ಮೂಲಕ ಸ್ಥಳೀಯರಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನೆರವಾಗಲಿದೆ. ಸ್ಥಳೀಯವಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವುದರಿಂದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಿದಂತೆ ಆಗಲಿದೆ.
ಮೈಸೂರು ಮೂಲದ ಮೈಸೂರು ಟ್ಯಾಕ್ಸಿವಾಲಾ ಸಂಸ್ಥೆ ಜಾಗತಿಕ ಹೂಡಿಕೆದಾರರ ಗಮನ ಸೆಳೆದಿರುವುದು ಚೇತನ್ ಕುಮಾರ್ ಅವರ ಸಾಧನೆಯೇ ಸರಿ. ಇದರಿಂದ ಸಂಸ್ಥೆ ತನ್ನ ಸಾಧನೆಯ ಹಾದಿಯನ್ನು ಮತ್ತಷ್ಟು ವಿಸ್ತರಿಸಬಹುದಾಗಿದೆ. ಜತೆಗೆ ಕರ್ನಾಟಕಕ್ಕೆ ಹಸಿರು ಮತ್ತು ಹೆಚ್ಚು ಸುಸ್ಥಿರ ಸಾರಿಗೆ ಸೇವೆ ನೀಡಲು ಹೆಚ್ಚಿನ ಅನುಕೂಲವಾಗಲಿದೆ. ಯುಕೆ ಮೂಲದ ಫಿನ್ಟೆಕ್ ಸಂಸ್ಥೆ ಬೆಂಬಲವು ತಮ್ಮ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಮೈಸೂರು ಟ್ಯಾಕ್ಸಿವಾಲಾ ಸಂಸ್ಥಾಪಕ ಚೇತನ್ ಕುಮಾರ್.