ನವದೆಹಲಿ : ಜಾರ್ಖಂಡ್ನ ಮಾಜಿ ಸಿಎಂ ಚಂಪೈ ಸೊರೇನ್ ಅವರ ಆರೋಗ್ಯದಲ್ಲಿ ಇಂದು ದಿಢೀರ್ ಏರುಪೇರಾಗಿದ್ದು, ಅವರನ್ನು ರಾಂಚಿಯ ಜೆಮ್ಶೆಡ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಕಡಿಮೆ ರಕ್ತದ ಒತ್ತಡದಿಂದಾಗಿ ಬಳಲಿದ ಸಂಪೈ ಅವರಿಗೆ ತಲೆ ಸುತ್ತು ಬಂದಿದ್ದು, ಈ ಕಾರಣಕ್ಕೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.