ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಓರ್ವ ಬಾಲಕ ಜೋಕಾಲಿ ಆಡುತ್ತಿದ್ದ ಹಗ್ಗ ಕೊರಳಿಗೆ ಸಿಕ್ಕಿ ಸಾವನಪ್ಪಿದ್ದಾನೆ.
ಮೃತ ಬಾಲಕನನ್ನು ಪಿ.ಜೆ ಕೊಟ್ರೇಶ್ (14) ಎಂದು ಗುರುತಿಸಲಾಗಿದೆ. ಈತ ಖಾಸಗಿ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದನು. ಈತ ಶಾಲೆ ಮುಗಿಸಿ ಬಂದು ಮನೆಯಲ್ಲಿ ಜೋಕಾಲಿಯಲ್ಲಿ ಕುಳಿತು ಆಟವಾಡುತ್ತಿದ್ದನು. ಈ ವೇಳೆ ಜೋಕಾಲಿ ಹಗ್ಗವು ಆಕಸ್ಮಿಕವಾಗಿ ಕೊರಳಿಗೆ ಸುತ್ತಿಕೊಂಡಿದೆ. ಪರಣಾಮ ಹಗ್ಗ ಬಿಗಿಯಾಗಿ ಬಾಲಕನಿಗೆ ಉಸಿರಾಡಲು ಸಾಧ್ಯವಾಗದೇ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.