ಟಿವಿ ಮಾಧ್ಯಮಗಳ ಮೇಲೆ ಸಿಎಂ ಸಿದ್ದು ಸಿಡಿಮಿಡಿ..! » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು, ನ.22,2024: (www.justkannada.in news) ಸತ್ಯವನ್ನು ತೋರಿಸಿ, ಸುಳ್ಳನ್ನು ಪ್ರಚಾರ ಮಾಡಬೇಡಿ. ಸತ್ಯ – ಸುಳ್ಳನ್ನು ಪರಾಮರ್ಶಿಸಿದೆ ಕೇವಲ ಸುದ್ದಿ ಮಾಡುವುದೇ ಆದರೆ, ವಾಟ್‌ ಇಸ್‌ ದ ರೋಲ್‌ ಆಫ್‌ ಮೀಡಿಯಾ..? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿಗೊಂಡರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಒಂದು ಹಂತದಲ್ಲಿ ಮೀಡಿಯಾಗಳ ವಿರುದ್ಧ ಹರಿಹಾಯ್ದರು.

ಟಿವಿಗಳಲ್ಲಿ ಸರಕಾರದ ಜನಪರ ಕಾರ್ಯಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಲ್ಲ. ಬದಲಿಗೆ ವಿಪಕ್ಷಗಳ ಸುಳ್ಳು ಆರೋಪಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಬಿಪಿಎಲ್‌ ಕಾರ್ಡ್‌ ಪರಿಷ್ಕರಣೆ ಯಾವ ಕಾರಣಕ್ಕೆ ಮಾಡುತ್ತಿದ್ದೇವೆ ಎಂಬ ಬಗ್ಗೆ ಜಾಗೃತಿ ಮೂಡಿಸಬೇಕಾದ ಮಾಧ್ಯಮ, ವಿಪಕ್ಷಗಳ ಆರೋಪಗಳಿಗೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಟೀಕಿಸಿದರು. ಇದಕ್ಕೆ ಟಿವಿ ವಾಹಿನಿ ಪ್ರತಿನಿಧಿ ಆಕ್ಷೇಪಿಸಿದಾಗ, ನೀನ್‌ ಇಲ್ಲಿ ಹೇಳಬಹುದಪ್ಪ, ಆದ್ರೆ ನಿಮ್‌ ಎಡಿಟರ್‌ ಕೇಳಬೇಕಲ್ವಾ..?  ನಾನು ನಿಮ್‌ ಟಿವಿ ನೋಡಿದ್ದೀನಿ , ಡೋಂಟ್‌ ಡಿಬೇಟ್ ಎಂದು ಸಿಎಂ ಸಿದ್ದರಾಮಯ್ಯ ಖಾರವಾಗಿ ಪ್ರತ್ಯುತ್ತರಿಸಿದರು.

.ಸಿಎಂ ಕಿಡಿ:

ಏಯ್ ಯಾವನಯ್ಯಾ ನೀನು? ನಿಂಗೆ ಎಲ್ಲಾ ಗೊತ್ತಾ? ಮಾಧ್ಯಮ ಅಂದ್ರೆ ಏನ್ ಹೇಳು? ಅಲ್ಲಿಂದ ಇಲ್ಲಿಗೆ, ಇಲ್ಲಿಗೆ ಅಲ್ಲಿಗೆ ಕೇಳ್ಕಂಡ್ ಬಂದು ಹೇಳೋದಾ? ಜನಗಳಿಗೆ ಸತ್ಯ ತೋರಿಸ್ರಪ್ಪಾ? ಬರೀ ಸುಳ್ ಸುಳ್ ಸುದ್ದೀನೆ ಹಾಕ್ತೀರಿ
ದಿನ ಬೆಳಗಾದ್ರೆ ಬರೀ ಸುಳ್ಳು ನ್ಯೂಸನ್ನೇ ಪ್ರಸಾರ ಮಾಡ್ತೀರಿ. ನಾವ್ ಮಾಡೋ ಕೆಲಸ ತೋರಿಸಿ ಬಿಜೆಪಿಯವರ ಪ್ರತಿಭಟನೆ ಯಾಕೆ ತೋರುಸ್ತೀರಿ?  ಏಯ್ ಕೇಳಯ್ಯಾ ಅಂತ ಟೇಬಲ್‌ ಕುಟ್ಟಿ, ಹಲ್ಲು‌ಮುರಿ ಕಚ್ಚಿದ್ದ ಸಿದ್ದರಾಮಯ್ಯ ಆಕ್ರೋಶ. ಮಾಧ್ಯಮವಂತೆ ಮಾಧ್ಯಮ ಅಂತ ಕಿಡಿಕಾರಿದರು.

key words: CM, Siddu, Siddaramaiah, lashes out, TV media

SUMMARY: 

“CM Siddu lashes out at TV media”

Chief Minister Siddu has expressed strong criticism or anger towards television media. He likely criticized their reporting, coverage, or the way they present news, perhaps accusing them of being biased or irresponsible.

Font Awesome Icons

Leave a Reply

Your email address will not be published. Required fields are marked *