ಮಂಗಳೂರು: ಖ್ಯಾತ ಸಾಂಸ್ಕೃತಿಕ ಸಂಘಟಕ ಮತ್ತು ಕೊಂಕಣಿ ನಾಟಕ ಸಭಾ ಸಂಸ್ಥೆ ಹಾಗೂ ಮಂಗಳೂರಿನ ಹೆಸರಾಂತ ಡಾನ್ ಬಾಸ್ಕೋ ಸಭಾಂಗಣದ ದೀರ್ಘಕಾಲದ ವ್ಯವಸ್ಥಾಪಕ ಬೋನಿಫಾಸ್ ಪಿಂಟೋ (62.) ಅಲ್ಪಾವಧಿಯ ಆರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳೆದರು.
ಬೋನಿಫಾಸ್ ಪಿಂಟೋ ಅವರು ತಮ್ಮ ವೃತ್ತಿಜೀವನದ ಅವಧಿಯಲ್ಲಿ 28 ವರ್ಷಗಳ ಕಾಲ ಕೆಎನ್ಎಸ್ಗೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ಸಂಘಟನಾ ಚಾತುರ್ಯತೆ, ಸಮಯಪ್ರಜ್ಞೆ ಮತ್ತು ಸರಳ ಸ್ವಭಾವದಿಂದಾಗಿ ಜನರ ಮನ್ನಣೆ ಗಳಿಸಿದ್ದರು.
ಸ್ಪರ್ಧೆಗಳ ಆಯೋಜನೆ, ರಂಗಭೂಮಿ ವಿನ್ಯಾಸ ಮತ್ತು ರಂಗಭೂಮಿಯ ವಸ್ತ್ರವಿನ್ಯಾಸ ಹಾಗೂ ನಿರ್ವಹಣೆಯಲ್ಲಿ ವಿಶೇಷ ಪರಿಣಿತಿ ಹೊಂದಿದವರಾಗಿದ್ದರು. ಮೃತರು ರೀಟಾ ಪಿಂಟೋ ಮತ್ತು ದಿವಂಗತ ಸಿಪ್ರಿಯನ್ ಪಿಂಟೋ ಅವರು ಪುತ್ರರಾಗಿದ್ದು, ಜಿನ್ನಾ, ಲೋನಾ, ಡಯಾನಾ, ಆಶಾ ಅವರ ಸಹೋದರಿಯರನ್ನು ಅಗಲಿದ್ದಾರೆ.
ನ. 11ರಂದು ಡಾನ್ ಬಾಸ್ಕೋ ಹಾಲ್ನಲ್ಲಿ ಮಧ್ಯಾಹ್ನ 2.15 ಕ್ಕೆ ಮತ್ತು ಜೆಪ್ಪು ಚರ್ಚ್ ನಲ್ಲಿ 3.30ಕ್ಕೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.