ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ಕೇಸ್ ದಾಖಲು!

ಜಾನಿ ಮಾಸ್ಟರ್ ವಿರುದ್ಧ ಸೈಬೆರಾಬಾದ್ ಪೊಲೀಸರು ಅತ್ಯಾಚಾರ ಆರೋಪದಡಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಜಾನಿ ಮಾಸ್ಟರ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಪುನೀತ್ ರಾಜ್​ಕುಮಾರ್ ನಟನೆಯ ಅನೇಕ ಸಿನಿಮಾಗಳಿಗೆ ಡ್ಯಾನ್ಸ್ ಕೊರಯೋಗ್ರಾಫ್ ಮಾಡಿದ್ದಾರೆ.

ಅವರು ಕೊರಿಯೋಗ್ರಾಫಿ ಮಾಡಿದ ‘ವಿಕ್ರಾಂತ್ ರೋಣ’ ಚಿತ್ರದ ‘ರಾ ರಾ ರಕ್ಕಮ್ಮ’, ‘ಪುಷ್ಪ’ ಚಿತ್ರದ ‘ಶ್ರೀವಲ್ಲಿ..’ ಸೇರಿ ಅನೇಕ ಹಾಡುಗಳು ಹಿಟ್ ಆಗಿವೆ. ಈಗ ಅವರು ಗಂಭೀರ ಆರೋಪ ಎದುರಿಸುವಂತೆ ಆಗಿದೆ. ಜಾನಿ ಮಾಸ್ಟರ್ ಜೊತೆ ಕೆಲಸ ಮಾಡುತ್ತಿರುವ 21 ವರ್ಷದ ಯುವತಿ ಈ ಆರೋಪ ಮಾಡಿದ್ದಾರೆ.

ಹಲವು ವರ್ಷಗಳಿಂದ ಅವರು ಜಾನಿ ಮಾಸ್ಟರ್ ಜೊತೆ ಕೆಲಸ ಮಾಡುತ್ತಿದ್ದಾರೆ. ಅವರು ದೇಶದ ನಾನಾ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಕ್ಕಾಗಿ ತೆರಳಿದಾಗ ಅತ್ಯಾಚಾರ ಮಾಡಿದ್ದಾಗಿ ಹೇಳಿದ್ದಾರೆ. ಇದನ್ನು ಬಿಚ್ಚಿಟ್ಟರೆ ತೊಂದರೆ ಎದುರಿಸಬೇಕಾಗಿ ಬರಹುದು ಎಂದು ಅವರು ಬೆದರಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ರಾಯದುರ್ಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ನಂತರ ಇದನ್ನು ರಂಗರೆಡ್ಡಿ ಜಿಲ್ಲೆಯ ನರ್ಸಿಂಗಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ‘ಜಾನಿ ಮಾಸ್ಟರ್​ ವಿರುದ್ಧ ಕೇಸ್ ದಾಖಲು ಮಾಡಿಕೊಂಡಿದ್ದೇವೆ. ಭಾನುವಾರ ರಾತ್ರಿ ಈ ಕೇಸ್ ದಾಖಲು ಮಾಡಲಾಗಿದೆ’ ಎಂದು ನರ್ಸಿಂಗಿ ಪೊಲೀಸ್ ಠಾಣೆಯ ಎಸ್​​ಎಚ್​ಒ ಹರಿ ಕೃಷ್ಣ ರೆಡ್ಡಿ ಹೇಳಿದ್ದಾರೆ.

 

 

 

Font Awesome Icons

Leave a Reply

Your email address will not be published. Required fields are marked *