ಬೆಂಗಳೂರು: ‘ತಣ್ಣಗಾದ್ರೆ ಸೌದೆಗೆ ಏನ್ ಬೆಲೆ.. ಬೆಂಕಿ ಬಿದ್ರೆ ತಾನೆ.. ದೊಡ್ಡವರ ಮೈ ಕಾಯೋದು…’ 3 ನಿಮಿಷ 4 ಸೆಕೆಂಡ್ನ ಟೋಬಿ ಟ್ರೇಲರ್ನಲ್ಲಿ ಗಮನಸೆಳೆಯುವ ಡೈಲಾಗ್ ಇದು. 2015ರಲ್ಲಿ ರಾಜ್ ಬಿ ಶೆಟ್ಟಿ ಅವರ ಸಹಾಯಕರಾಗಿ ಕೆಲಸ ಮಾಡಿದ್ದ ಬಾಸಿಲ್ ಅಲ್ಚಲಕ್ಕಲ್ ನಿರ್ದೇಶನದ ಟೋಬಿ ಚಿತ್ರ ಇದೇ 25 ರಂದು ಬಿಡುಗಡೆಯಾಗಲಿದೆ. ಇದರ ಬಹುನಿರೀಕ್ಷಿತ ಟ್ರೇಲರ್ ಇದೀಗ(ಆ.04) ಬಿಡುಗಡೆಯಾಗಿದೆ.
ಟಿಕೆ ದಯಾನಂದ್ ಅವರ ಕಥೆಯನ್ನು ಮೂಲವಾಗಿಟ್ಟಿಕೊಂಡು ರಾಜ್ ಬಿ ಶೆಟ್ಟಿ ಈ ಚಿತ್ರದ ಕಥೆ ಬರೆದಿದ್ದಲ್ಲದೆ, ನಿರ್ಮಾಣ ಕೂಡ ಮಾಡಿದ್ದಾರೆ. ಸಾಮಾನ್ಯವಾಗಿ ರಾಜ್ ಬಿ ಶೆಟ್ಟಿ ಚಿತ್ರಗಳ ಮತ್ತೆರಡು ಪಿಲ್ಲರ್ಗಳಾದ ಮ್ಯೂಸಿಕ್ ಕಂಪೋಸರ್ ಮಿಧುನ್ ಮುಕುಂದನ್ ಹಾಗೂ ಸಿನಿಮಾಟೋಗ್ರಾಫರ್ ಪ್ರವೀಣ್ ಶ್ರೀಯನ್ ಇಲ್ಲೂ ಮುಂದುವರಿದಿದ್ದಾರೆ.ಚೈತ್ರಾ ಜೆ ಆಚಾರ್, ಸಂಯುಕ್ತಾ ಹೊರನಾಡ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಹರಕೆ ಕುರಿ ತಪ್ಪಿಸಿಕೊಂಡಿದೆ. ಆದ್ರೆ ಆ ಕುರಿ ಹಿಂದೆ ಬಂದ್ರೆ ಕುರಿ ಆಗಿರಲ್ಲ.. ಮಾರಿ ಆಗಿರುತ್ತೆ..’ಎನ್ನುವ ಡೈಲಾಗ್ ಮೂಲಕ ಆರಂಭವಾಗುವ ಟೋಬಿ ಟ್ರೇಲರ್ನಲ್ಲಿ, ತಮಾಷೆ, ಆಕ್ರೋಶ, ದ್ವೇಷ, ಸಮಾಜದ ದೊಡ್ಡವರಿಂದ ಆಗುವ ಅನ್ಯಾಯ, ಬಡವರನ್ನು ಹರಕೆಯ ಕುರಿ ಮಾಡುವ ಹಂತ ಎಲ್ಲವೂ ಕಾಣಸಿಗುತ್ತದೆ. ಅದರಲ್ಲೂ ‘ತಣ್ಣಗಾದ್ರೆ ಸೌದೆಗೆ ಏನ್ ಬೆಲೆ.. ಬೆಂಕಿ ಬಿದ್ರೆ ತಾನೆ..ದೊಡ್ಡವರ ಮೈ ಕಾಯೋದು..’ ಎನ್ನುವ ಡೈಲಾಗ್ ಟ್ರೇಲರ್ ವೀಕ್ಷಿಸಿದವರ ಗಮನಸೆಳೆದಿದೆ.
ಸದ್ಯ ಸೊಶೀಯಲ್ ಮಿಡಿಯಾಗಳಲ್ಲಿ ಟೋಬಿ ಟ್ರೇಲರ್ ಸಕತ್ ಸೌಂಡ್ ಮಾಡ್ತಿದೆ