ತನಿಖೆಗೆ ಎಸ್‌ಐಟಿ ರಚನೆಗೆ ಸಚಿವ ಸಂಪುಟ ನಿರ್ಧಾರ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಬೆಂಗಳೂರು: ಕೋವಿಡ್ 19 ಅಕ್ರಮದ ತನಿಖೆಗೆ ರಾಜ್ಯ ಸರ್ಕಾರ SIT ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಜಸ್ಟೀಸ್ ಮೈಕಲ್ ಡಿ ಕುನ್ಹಾ ಅವರ ಮಧ್ಯಂತರ ವರದಿ ಆಧರಿಸಿ ಅಕ್ರಮದ ತನಿಖೆಗೆ SIT ತನಿಖೆಗೆ ನಡೆಸಲು ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದೆ.

ಇದರ ಜೊತೆಗೆ ಕ್ಯಾಬಿನೆಟ್ ಸಬ್ ಕಮಿಟಿ ರಚನೆಗೂ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಕ್ಯಾಬಿನೆಟ್ ಸಭೆ ಮುಗಿದ ಬಳಿಕ ಪ್ರತಿಕ್ರಿಯೆ ನೀಡಿದ ಸಚಿವ ಎಚ್.ಕೆ.‌ಪಾಟೀಲ್, ಕುನ್ಹಾ ಆಯೋಗ 11 ಸಂಪುಟಗಳಲ್ಲಿ ವರದಿ ಸಲ್ಲಿಸಿದೆ. 7223.64 ಕೋಟಿ ಮೊತ್ತದ ಅಕ್ರಮ ಆಗಿರೋ ಕುರಿತು ತನಿಖೆ ನಡೆಯುತ್ತಿದೆ. ಇದರಲ್ಲಿ 500 ಕೋಟಿ ಮೊತ್ತದ ವಸೂಲಾತಿಗೆ ವರದಿಯಲ್ಲಿ ಆಯೋಗ ಶಿಫಾರಸು ಮಾಡಿದೆ.‌

BBMP ನಾಲ್ಕು ವಲಯಗಳ, 31 ಜಿಲ್ಲೆಗಳ ವರದಿ ಬಾಕಿ ಇದೆ. 55 ಸಾವಿರ ಕಡತಗಳನ್ನ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ಪಡೆದು ಆಯೋಗ ವರದಿ ನೀಡಿದೆ. ಈ ಹಿನ್ನಲೆಯಲ್ಲಿ SIT ರಚನೆಗೆ ಕ್ಯಾಬಿನೆಟ್ ನಿರ್ಧಾರ ಮಾಡಿದೆ ಎಂದು ತಿಳಿಸಿದರು.

ವಸೂಲಾತಿ ಪ್ರಕ್ರಿಯೆ ಕೂಡಲೇ ಮಾಡಬೇಕು. ವಸೂಲಾತಿ ಪ್ರಕ್ರಿಯೆ ಒಳಗೆ ಪಾಲುದಾರರನ್ನ ಬ್ಲ್ಯಾಕ್ ಲಿಸ್ಟ್ ಮಾಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಅಕ್ರಮದಲ್ಲಿ ಯಾರೇ ಶಾಮೀಲಾಗಿದ್ದರೂ, SIT ತನಿಖೆ ಮಾಡುತ್ತೆ ಅಂತಾ ಸಚಿವರು ತಿಳಿಸಿದರು.

Font Awesome Icons

Leave a Reply

Your email address will not be published. Required fields are marked *