ನವದೆಹಲಿ: ಕೆಲವೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದರೆ ಭಾರತ ವಿಶ್ವದಲ್ಲೇ ಮೂರನೇ ದೊಡ್ಡ ಆರ್ಥಿಕತೆಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ವೇಳೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ನವರು 11ನೇ ಸ್ಥಾನಕ್ಕೆ ಹೆಮ್ಮ ಪಡುತ್ತಿದ್ದಾರೆ. ನಾವು ಐದನೇ ಸ್ಥಾನಕ್ಕೆ ಬಂದಿದ್ದೇವೆ. ಆಗ ಖುಷಿ ಪಡುತ್ತಿದ್ದವರು ಈಗಲೂ ಪಡಬೇಕು ಎಂದಿದ್ದಾರೆ.
ಪ್ರಸ್ತುತ ಐದನೇ ದೊಡ್ಡ ಆರ್ಥಿಕತೆಯಾಗಿರುವ ಭಾರತ, ಬರುವ ೩೦ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೇರಲಿದೆ ಎಂದು ಅವರು ಭಾವಿಸಿದ್ದಾರೆ. ಆದರೆ ನಾವು ಅಷ್ಟು ದೀರ್ಘಾವಧಿ ಕಾಯದೆ, ನಮ್ಮ ಮೂರನೇ ಅವಧಿಯಲ್ಲಿಯೇ ಆ ಗುರಿ ತಲುಪಲಿದ್ದೇವೆ. ಇದು ಮೋದಿಯ ಗ್ಯಾರೆಂಟಿ ಎಂದು ಅವರು ಘೋಷಿಸಿದ್ದಾರೆ.
ತಮ್ಮ ಸರ್ಕಾರದ ಜನಪರ ಕೆಲಸಗಳನ್ನು ಉಲ್ಲೇಖಿಸಿದ ಮೋದಿ, ಕಾಂಗ್ರೆಸ್ಸ್ಗೆ ಇಷ್ಟು ಕೆಲಸ ಮಾಡಲು ೧೦೦ ವರ್ಷ ಬೇಕಿತ್ತು ಎಂದು ಟೀಕೆ ಮಾಡಿದ್ದಾರೆ.