ತರುಣ್ ಚುಗ್ ಬಂದಿರುವುದು ಪಕ್ಷದ ಸಂಘಟನೆಗೆ ಹೊರತು ಆಂತರಿಕ ವಿಚಾರದ ಚರ್ಚೆಗೆ ಅಲ್ಲ- ಬಿವೈ ವಿಜಯೇಂದ್ರ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ಡಿಸೆಂಬರ್,3,2024 (www.justkannada.in) ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ರಾಜ್ಯಕ್ಕೆ ಬಂದಿರುವುದು ಪಕ್ಷದ ಸಂಘಟನೆಗೆ ಹೊರತು ಆಂತರಿಕ ವಿಚಾರದ ಚರ್ಚೆಗೆ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿವೈ ವಿಜಯೇಂದ್ರ ಸ್ಪಷ್ಟಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಪಕ್ಷದ ಆಂತರಿಕ ವಿಚಾರ ಬಗ್ಗೆ ಚರ್ಚೆಗೆ ಚುಗ್ ಬಂದಿಲ್ಲ ಚುಗ್ ಬಂದಿರುವುದು ಪಕ್ಷ ಸಂಘಟನೆ ದೃಷ್ಠಿಯಿಂದ ಮಾತ್ರ  ಇದು ಬಿಟ್ರೆ ಮತ್ತೇನು ಚರ್ಚೆ ಇಲ್ಲ. ಅಂತಹ ವಿಚಾರ ಇದ್ದಿದ್ದರೇ ರಾಧಾಮೋಹನ್ ಸಿಂಗ್ ಬರುತ್ತಿದ್ದರು ಎಂದರು.

ಪಕ್ಷದ ಸಂಘಟನಾ ಪರ್ವದ ಚಟುವಟಿಕೆಗಳ ಭಾಗವಾಗಿ ರಾಜ್ಯ ಕಚೇರಿಯಲ್ಲಿ ಇಂದು ಇಡೀ ದಿನ ಸರಣಿ ಸಭೆಗಳು ನಡೆಯಲಿವೆ. ಅಭಿಪ್ರಾಯಗಳ ಸಂಗ್ರಹಣೆ ಉದ್ದೇಶವಿಲ್ಲ, ಸಂಘಟನಾತ್ಮಕ ಚಟುವಟಿಕೆಗಳು ಬಿಟ್ಟು ಬೇರೆ ವಿಷಯಗಳ ಚರ್ಚೆಗೆ ಅವಕಾಶವಿಲ್ಲ ಎಂದು ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ​ರನ್ನುಉಚ್ಚಾಟನೆ ಮಾಡುವ ಕುರಿತು ತರುಣ್ ಚುಗ್ ಅವರಿಗೆ ಮನವಿ ಸಲ್ಲಿಸಲು ಜಿಲ್ಲಾ ಘಟಕ  ನಿರ್ಧರಿಸಿರುವ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಈ ಬಗ್ಗೆ ತಿಳಿದಿಲ್ಲ. ಆದರೆ ಯಾವುದೇ ಮನವಿ ಅಥವಾ ಸಲ್ಲಿಸುವುದಕ್ಕೆ ಇದು ವೇದಿಕೆಯಲ್ಲ’ ಎಂದರು.

Key words: Tarun Chugh, party organization, BY Vijayendra

Font Awesome Icons

Leave a Reply

Your email address will not be published. Required fields are marked *