ತುಂಗಾ ತೀರದಲ್ಲಿ ಹೊಸ ಪ್ರವಾಸಿ ತಾಣ ನಿರ್ಮಾಣ: ಮಲೆನಾಡು ಪ್ರಿಯರಿಗೆ ಗುಡ್‌ ನ್ಯೂಸ್‌

ಶಿವಮೊಗ್ಗ: ಈಗಾಗಲೇ ಪ್ರವಾಸಿಗರ ಗಮನ ಸೆಳೆದಿರುವ ಜಿಲ್ಲೆಗೆ ಮತ್ತೊಂದು ಪ್ರವಾಸಿ ತಾಣ ಸೇರ್ಪಡೆ ಗೊಂಡಿದೆ. ಜಿಲ್ಲೆಯಲ್ಲಿ . ಜೋಗ್ ಫಾಲ್ಸ್, ಲಯನ್ ಸಫಾರಿ, ಸಕ್ರೆಬೈಲು ಆನೆಬಿಡಾರ, ಸಿಗಂದೂರು ದೇವಸ್ಥಾನ, ಕೊಡಚಾದ್ರಿ, ಆಗುಂಬೆ ಸೂರ್ಯಾಸ್ಥ ಸ್ಥಳ ಸೇರಿದಂತೆ ಹತ್ತು ಹಲವು ಪ್ರವಾಸಿ ತಾಣಗಳಿವೆ. ಇದನ್ನುನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬಂದು ಕಣ್ತುಂಬಿ ತಮ್ಮನ್ನ ತಾವೆ ಮರೆಯುತ್ತಾರೆ ಅಂತಹ ಸುಂದರ ಸ್ವರ್ಗ ಈ ಶಿವಮೊಗ್ಗ ಜಿಲ್ಲೆ.

ಹೀಗಿರುವಾಗ ನಗರದಲ್ಲಿ ಹರಿದು ಹೋಗಿರುವ ತುಂಗಾ ನದಿ ತೀರವನ್ನು ಮಹಾನಗರ ಪಾಲಿಕೆಯು ಬಳಕೆ ಮಾಡಿಕೊಂಡು 80 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ಅಭಿವೃದ್ಧಿ ಕಾಮಗಾರಿಯು ನಡೆದಿದೆ. ಗುಜರಾತ್​ನ ಸಬರಮತಿ ನದಿ ತೀರದ ಅಭಿವೃದ್ದಿ ಮಾದರಿಯಲ್ಲಿ ಈ ತುಂಗಾ ನದಿ ತೀರ ಅಭಿವೃದ್ಧಿ ಆಗಿರುವುದು ವಿಶೇಷ.

ತುಂಗಾ ನದಿ ತೀರದಲ್ಲಿ ಅಭಿವೃದ್ಧಿ ಹೇಗಿದೆ ಎಂದು ನೋಡುವುದಾರೆ, ತುಂಗಾ ನದಿಯಲ್ಲಿ 2.8 ಕಿ.ಮೀ. ಉದ್ದದ ವಾಕಿಂಗ್ ಪಾತ್ ಅಭಿವೃದ್ಧಿಪಡಿಸಲಾಗಿದೆ. ವಾಕಿಂಗ್ ಪಾತ್, ಗಾರ್ಡನ್​​ಗಳು, ಪಾರಂಪರಿಕ ಪ್ರತಿಮೆಗಳು, ದೋಣಿ ವಿಹಾರವನ್ನ ನಿರ್ಮಿಸಲಾಗಿದೆ. ಆದರೆ, ದೋಣಿ ವಿಹಾರವನ್ನ ಮಳೆಗಾಲ ಹೊರತುಪಡಿಸಿ ಗುಜರಾತ್​ನ ಸಾಬರಮತಿ ನದಿಯ ದಂಡೆಯ ಮೇಲೆ ನಿರ್ಮಾಣವಾಗಿರುವಂತೆ ನಿರ್ಮಿಸಲಾಗುತ್ತಿದೆ. ಸಾರ್ವಜನಿಕರಿಗೆ ಆರಂಭದಲ್ಲಿ ಉಚಿತವಾಗಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಮಾ. 8 ರ ಬಳಿಕ ಪ್ರವಾಸಿ ತಾಣಕ್ಕೆ ಜನರ ಸ್ಪಂಧನೆ ನೋಡಿಕೊಂಡು ಪ್ರವೇಶ ಶುಲ್ಕದ ಕುರಿತು ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಕತ್ತಲ ಗೂಡಾಗಿದ್ದ ಈ ಜಾಗ ಇದೀಗ ರಾತ್ರಿಯೂ ಕೂಡ ಹಗಲಿನಂತೆ ಆಗಿದೆ. ತಂಪಾದ ಗಾಳಿ ಬೀಸುವ ಇಲ್ಲಿ ವಾಯು ವಿಹಾರಕ್ಕೆ ತಕ್ಕದ್ದಾಗಿದೆ. ನದಿ ತೀರದ ಪರಿಸರ, ಪಕ್ಷಿಗಳ ಹಾರಾಟ ಮತ್ತು ಚಿಲಿಪಿಲಿ ಶಬ್ದಗಳು. ಈ ತೀರದಲ್ಲಿ ರಿವರ್ ಫ್ರಂಟ್, ಚಿಲ್ಡ್ರನ್ ಸ್ಪೋರ್ಟ್ಸ್, ಬೈಪಾಸ್​ನಿಂದ ಬೆಕ್ಕಿನ ಕಲ್ಮಠ ತನಕ ಬೈಸಿಕಲ್ನಲ್ಲಿ ಸೈಕ್ಲಿಂಗ್ ಅವಕಾಶ ಕಲ್ಪಿಸಲಾಗಿದೆ. ವಾಯುವಿಹಾರಕ್ಕೆ ಈ ತಾಣವು ಹೇಳಿ ಮಾಡಿಸಿದ ಜಾಗವಾಗಿದೆ. ಇಲ್ಲಿ ಲ್ಯಾಂಡ್ ಸ್ಕೇಪಿಂಗ್ ಇದೆ. ಐದು ಕಟ್ಟಡ ಇದೆ. ಫುಡ್ ಕ್ಯಾಂಟೀನ್ ಇದೆ. ಇಂಡೋರ್ ಗೇಮ್ಸ್ ಬ್ಯಾಸ್ಕೆಟ್ ಬಾಲ್ ಆಡುವ ವ್ಯವಸ್ಥೆ ಮಾಡಲಾಗಿದೆ.

ತುಂಗಾ ನದಿ ಹಾಗೂ ಇಲ್ಲಿಗೆ ಬರುವ ವಿಶೇಷ ಪಕ್ಷಿಗಳ ವೀಕ್ಷಣೆಗಾಗಿ ವಾಚ್ ಟವರ್ ನಿರ್ಮಿಸಲಾಗಿದೆ. ನೀರು ಶೇಖರಣೆ ಮಾಡಿ ಬೋಟಿಂಗ್ ಅವಕಾಶ ಕಲ್ಪಿಸಲಾಗಿದೆ. ಐದು ಆಕ್ಟಿವಿಟಿ ವಾಲ್ ಇದೆ. ಪ್ರಕೃತಿಯನ್ನು ನೋಡಲು ಕಲ್ಲಿನ ಬೆಂಚ್ ಇದೆ. ಬಯಲು ರಂಗಮಂದಿರವಿದೆ. ವಿವಿಧೋದ್ದೇಶ ಕ್ರೀಡಾ ಸಂಕೀರ್ಣ ಇದೆ.ಒಟ್ಟಾಗಿ ಸ್ವರ್ಗದ ಪ್ರತಿರೂಪವಾಗಿದೆ.

ಅಲ್ಲದೇ ತುಂಗಾ ನದಿಯಾ ತೀರವನ್ನು ವಿದ್ಯುತ್‌ ದೀಪಗಳಿಂದ ಅಲಾಂಕೃತವಾಗಿದೆ.ಈ ಅಭಿವೃದ್ಧಿ ಯೋಜನೆಯು 10 ವರ್ಷದ ನಿರ್ವಹಣೆಗೆ 22.43 ಕೋಟಿ ಹಣವನ್ನು ಮೀಸಲು ಇಡಲಾಗಿದೆ. ಸದ್ಯ ಮಲೆನಾಡಿನಲ್ಲಿ ಅತ್ಯುತ್ತಮ ಪ್ರವಾಸಿ ತಾಣದ ಅಭಿವೃದ್ದಿ ಯೋಜನೆಯಲ್ಲಿ ಇದು ಒಂದಾಗಿದೆ.

ಈ ತುಂಗಾ ನದಿ ತೀರ ಸುಂದರ ಸ್ಥಳ ವೀಕ್ಷಣೆ ಮತ್ತು ಆಸ್ವಾದಿಸಲು 22 ಬ್ಯಾಟರಿ ಚಾಲಿತ ಸೈಕಲ್​ಗಳನ್ನು ಇಡಲಾಗಿದೆ. ಸೈಕಲಿಂಗ್ ಮೂಲಕ ಯುವಕರು ಮಕ್ಕಳು ತುಂಗಾ ತೀರದ ಪರಿಸರವನ್ನು ಎಂಜಾಯ್ ಮಾಡಬಹುದಾಗಿದೆ. ಈಗಾಗಲೇ ಸ್ಥಳವನ್ನು ವೀಕ್ಷಿಸಲು ಪ್ರವಾಸಿಗರು ಹಾತೊರೆಯುತ್ತಿದ್ದಾರೆ. ತಾಣದ ಸವಿ ಸವಿಯಲು ಪ್ರವಾಸಿಗರು ಮುಗಿಬಿದ್ದಿದ್ದಾರೆ

Font Awesome Icons

Leave a Reply

Your email address will not be published. Required fields are marked *