ತೈಪೆ ಸಿಟಿ: ತೈವಾನ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಚೀನಾದ ಕಟ್ಟರ್ ವಿರೋಧಿಯಾಗಿರುವ ವಿಲಿಯಂ ಲಾಯ್ ನೇತೃತ್ವದ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಕ್ಷವು ಗೆಲುವು ಸಾಧಿಸಿದೆ.
ವಿಲಿಯಂ ಲಾಯ್ ಅವರು ತೈವಾನ್ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ವಿಲಿಯಂ ಲಾಯ್ ಅವರು ಚೀನಾದ ಕಟ್ಟರ್ ವಿರೋಧಿಯಾಗಿದ್ದಾರೆ. ಅವರು ಚೀನಾದ ಕುತಂತ್ರವನ್ನು ಬಹಿರಂಗವಾಗಿ ಖಂಡಿಸುತ್ತಾರೆ. ಇದೇ ಕಾರಣಕ್ಕೆ ತೈವಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜನ ವಿಲಿಯಂ ಲಾಯ್ ಅವರಿಗೆ ಮತ ನೀಡಬಾರದು ಎಂದು ಕುತಂತ್ರಿ ಚೀನಾ ಫರ್ಮಾನು ಹೊರಡಿಸಿತ್ತು.ಚೀನಾದ ಸೂಚನೆಯ ಮಧ್ಯೆಯೂ ತೈವಾನ್ ನಾಗರಿಕರು ವಿಲಿಯಂ ಲಾಯ್ ಅವರಿಗೆ ಮತ ನೀಡಿದ್ದಾರೆ.
ತೈವಾನ್ನ ಹಾಲಿ ಉಪಾಧ್ಯಕ್ಷರಾಗಿರುವ ವಿಲಿಯಂ ಲಾಯ್ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು. ವಿಲಿಯಂ ಲಾಯ್ ಅವರಿಗೆ ಕನ್ಸರ್ವೇಟಿವ್ ಕುವೋಮಿಂಟಾಂಗ್ ಪಕ್ಷದ ಹೌ ಯು-ಇಹ್ ಹಾಗೂ ತೈವಾನ್ ಪೀಪಲ್ಸ್ ಪಾರ್ಟಿಯ ಕೊ ವೆನ್-ಜೆ ಅವರು ತೀವ್ರ ಸ್ಪರ್ಧೆಯೊಡ್ಡಿದ್ದರು.
ತೈವಾನ್ ಮೇಲೆ ಚೀನಾ ದಾಳಿ?: ದ್ವೀಪರಾಷ್ಟ್ರವಾದ ತೈವಾನ್ನ ನೂತನ ಅಧ್ಯಕ್ಷರಾಗಿ ವಿಲಿಯಂ ಲಾಯ್ ಅಧಿಕಾರ ವಹಿಸಿಕೊಳ್ಳುವುದರಿಂದ ಕೆರಳಿರುವ ಚೀನಾ, ತೈವಾನ್ ಮೇಲೆ ದಾಳಿ ನಡೆಸಲಿದೆ ಎಂದು ಹೇಳಲಾಗುತ್ತಿದೆ.