ತಮಿಳುನಾಡು: ತಮಿಳುನಾಡಿನ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪೋಷಕರಲ್ಲಿ ಭೀತಿ ಮೂಡಿಸಿದೆ. ಶಾಲೆಗಳನ್ನು ಕೊಯಮತ್ತೂರಿನ PSBB ಮಿಲೇನಿಯಮ್ ಶಾಲೆ ಮತ್ತು ಕಾಂಚೀಪುರಂ ಜಿಲ್ಲೆಯ ಖಾಸಗಿ ಶಾಲೆ ಎಂದು ಗುರುತಿಸಲಾಗಿದೆ.
ಪಿಎಸ್ಬಿಬಿ ಮಿಲೇನಿಯಂ ಶಾಲೆಗೆ ಭಾನುವಾರ ರಾತ್ರಿ ಇಮೇಲ್ ಬಂದಿದ್ದರೆ, ಸೋಮವಾರ ಬೆಳಗ್ಗೆ ಶಾಲೆಗೆ ಕರೆ ಮಾಡಲಾಗಿದೆ. ಬೆದರಿಕೆ ಇ-ಮೇಲ್ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ನಂತರ ಸ್ಥಳದಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲದ ಕಾರಣ ಶಿಕ್ಷಕರು, ಪೋಷಕರು, ಮಕ್ಕಳು ನಿಟ್ಟುಸಿರುಬಿಟ್ಟಿದ್ದಾರೆ.
ಇನ್ನು ಪ್ರಧಾನಿ ಮೋದಿಯವರು ಇಂದು ಮಧ್ಯಾಹ್ನ ಚೆನ್ನೈ ಏರ್ಪೋರ್ಟ್ಗೆ ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ಕಲ್ಪಕಂಗೆ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ. ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮ ಮುಗಿದ ಮೇಲೆ 5 ಗಂಟೆಗೆ ವಿಮಾನ ನಿಲ್ದಾಣಕ್ಕೆ ಹಿಂತಿರುಗಿ ರಸ್ತೆ ಮಾರ್ಗವಾಗಿ ನಂದನಂನಲ್ಲಿರುವ ವೈಎಂಸಿಎ ಮೈದಾನಕ್ಕೆ ತೆರಳಲಿದ್ದಾರೆ. ಸಂಜೆ ತೆಲಂಗಾಣಕ್ಕೆ ಪ್ರಯಾಣ ಮಾಡಲಿದ್ದಾರೆ. ಹೀಗಾಗಿ ಪೊಲೀಸರು ಹೈ ಹೈಅಲರ್ಟ್ ಆಗಿ ಇದ್ದಾರೆ.