ದಕ್ಷಿಣ ಕೊರಿಯಾ: ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೇ ಮ್ಯುಂಗ್ ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಪ್ರಮುಖ ಪ್ರತಿಪಕ್ಷ ಡೆಮಾಕ್ರೆಟಿಕ್ ಪಕ್ಷದ ಮುಖ್ಯಸ್ಥರಾಗಿರುವ ಲೀ ಅವರು ಪತ್ರಕರ್ತರ ಜತೆ ಪ್ರಶ್ನೋತ್ತರ ಅವಧಿಯಲ್ಲಿ ಭಾಗಿಯಾಗಿದ್ದಾಗ ದುಷ್ಕರ್ಮಿಯೊಬ್ಬ ಕುತ್ತಿಗೆಯ ಎಡ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಕೋರನನ್ನು ತನ್ನ 50 ಅಥವಾ 60 ರ ಹರೆಯದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೊದಲು ಆತ ಲೀ ಬಳಿ ಆಟೋಗ್ರಾಫ್ ಕೇಳಿದ್ದ, ನಂತರ ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದಾನೆ. ಲೀ ತಕ್ಷಣ ಕುತತ್ಇಗೆ ಹಿಡಿದುಕೊಂಡು ನೆಲಕ್ಕೆ ಬಿದ್ದಿದ್ದರು. ತಕ್ಷಣ ಆರೋಪಿಯನ್ನು ಬಂಧಿಸಲಾಯಿತು.