ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸುತ್ತಿಲ್ಲ. ಆದರೆ ಇದೀಗ ಬಿಡುಗಡೆ ಆಗಲಿರುವ ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ದಕ್ಷಿಣದಲ್ಲಿಯೂ ಸೂಪರ್ ಹಿಟ್ ಆಗುವ ಮುನ್ಸೂಚನೆ ನೀಡಿದೆ. ತೆಲುಗು ರಾಜ್ಯಗಳಲ್ಲಿ ನಿರೀಕ್ಷೆಗೂ ಮೀರಿದ ಅಡ್ವಾನ್ಸ್ ಬುಕಿಂಗ್ ‘ಅನಿಮಲ್’ ಸಿನಿಮಾಕ್ಕೆ ಸಿಗುತ್ತಿದೆ. ಹೈದರಾಬಾದ್ ಒಂದರಲ್ಲೇ ನವೆಂಬರ್ 24ಕ್ಕೆ ‘ಅನಿಮಲ್’ ಸಿನಿಮಾದ 46% ಬುಕಿಂಗ್ ಆಗಿ ಹೋಗಿದೆ.
ಇನ್ನೂ ಸಿನಿಮಾ ಬಿಡುಗಡೆಗೆ ಒಂದು ವಾರವಿದ್ದು ಆ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ. ‘ಅನಿಮಲ್’ ಸಿನಿಮಾದ ನಿರ್ದೇಶಕ ತೆಲುಗಿನವರೇ ಆಗಿರುವ ಸಂದೀಪ್ ರೆಡ್ಡಿ ವಂಗಾ, ಅವರ ‘ಅರ್ಜುನ್ ರೆಡ್ಡಿ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಅದೇ ಕಾರಣಕ್ಕೆ ಈ ಸಿನಿಮಾದ ಮೇಲೂ ತೆಲುಗು ಪ್ರೇಕ್ಷಕರು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ‘ಅನಿಮಲ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಇನ್ನೂ ಓಪನ್ ಆಗಿಲ್ಲ.