ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಕೂಡ ಮುಂದೂಡಿಕೆಯಾಗಿದ್ದು, ವಿಚಾರಣೆಯನ್ನು ಕೋರ್ಟ್ ಅ.08ಕ್ಕೆ ಮುಂದೂಡಿದೆ. ಈ ಹಿಂದೆ ಅಕ್ಟೋಬರ್ 04ಕ್ಕೆ ವಿಚಾರಣೆ ನಡೆಸಿದ್ದ 57ನೇ ಸಿಸಿಹೆಚ್ ನ್ಯಾಯಾಲಯ, ದರ್ಶನ್ ಪರ ವಾದ ಮಂಡಿಸುತ್ತಿರುವ ವಕೀಲ ಸಿ.ವಿ. ನಾಗೇಶ್ ಅವರ ಹೇಳಿಕೆಗಳನ್ನು ಬಹಳ ಗಂಭೀರವಾಗಿ ಗಮನಿಸುತ್ತಿದೆ. ಈ ಹಿನ್ನಲೆ ಅರ್ಜಿ ವಿಚಾರಣೆಯನ್ನು ಪದೇ ಪದೇ ಮುಂದೂಡುತ್ತಿದೆ.