ದಸರಾ ಯಶಸ್ಸಿಗೆ ಶ್ರಮಿಸಿದ ಅಧಿಕಾರಿಗಳಿಗೆ ಔತಣಕೂಟ: ಧನ್ಯವಾದ ಹೇಳಿದ ಸಿಎಂ ಸಿದ್ದರಾಮಯ್ಯ. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

ಮೈಸೂರು, ಅ.24,2024: (www.justkannada.in news) ನಾಡಹಬ್ಬ ದಸರಾ ಮಹೋತ್ಸವ ಈ ಬಾರಿ ಅತ್ಯಂತ ಯಶಸ್ವಿಯಾಗಿದೆ. ಪ್ರತಿಯೊಂದು ಅಚ್ಚುಕಟ್ಟಾಗಿ ನಡೆದಿರುವ ಬಗ್ಗೆ ಸಾಕಷ್ಟು ಮಾಹಿತಿ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸವ್ಯಕ್ತಪಡಿಸಿದರು.

ಬೋಗಾದಿ ರಸ್ತೆಯ ವಾಕ್ ಮತ್ತು ಶ್ರವಣ ಸಂಸ್ಥೆಯ ಸಮೀಪವಿರುವ ರೀ ಜೆನ್‌ಟ ಸೆಂಟ್ರಲ್ ಜವಾಜಿ ಹೋಟೆಲ್‌ನಲ್ಲಿ ದಸರಾ ಮಹೋತ್ಸವ ಯಸಸ್ಸಿಗೆ ಶ್ರಮಿಸಿದ ಅಧಿಕಾರಿಗಳಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.

ನಾಡಹಬ್ಬ ದಸರಾ ನಮ್ಮೂರ ಹಬ್ಬವಾಗಿದೆ. ಇದೊಂದು ಜನರೇ ಸ್ವಯಂಪ್ರೇರಣೆಯಿಂದ ಸಂಭ್ರಮಿಸುವ ಹಬ್ಬ. ದಸರಾ ಮಹೋತ್ಸವವನ್ನು ಹಲವಾರು ವರ್ಷಗಳಿಂದ ಆಚರಿಸುವ ಸೌಭಾಗ್ಯ ನನಗೆ ದೊರೆಯುತ್ತಲೇ ಬಂದಿದೆ. ಉಪಮುಖ್ಯಮಂತ್ರಿ ಆಗಿದ್ದಾಗ ಅವಕಾಶ ದೊರೆತಿತ್ತು. ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಐದು ಬಾರಿ ಪುಷ್ಪಾರ್ಚನೆ ಮಾಡಿದ್ದೆ.ಕಳೆದ ವರ್ಷ ಬರಗಾಲದಿಂದ ಸರಳವಾಗಿ ಆಚರಿಸಿದ್ದೇವು. ಈಬಾರಿ ಜಲಾಶಯಗಳು ತುಂಬಿದ್ದರಿಂದ ಅದ್ಧೂರಿಯಾಗಿ ಆಚರಿಸಬೇಕೆಂಬ ನಿರ್ಧಾರದಂತೆ ಎಲ್ಲವೂ ನಡೆದಿದೆ. ಹಳೆಯದಕ್ಕೆ ಹೊಸತನವನ್ನು ಕೊಡಬೇಕು. ಈ ಬಾರಿ ದೀಪಾಲಂಕಾರವನ್ನು ವಿಶೇಷವಾಗಿ ಮಾಡಿದ್ದಲ್ಲದೆ, ಡ್ರೋಣ್ ಹಾರಾಟದ ಬಗ್ಗೆ ಮೆಚ್ಚುಗೆ ಬಂದಿತು ಎಂದರು.

ದಸರಾ ಮಹೋತ್ಸವದಲ್ಲಿ ಕೆಲಸ ಮಾಡುವ ಭಾಗ್ಯ ಎಲ್ಲರಿಗೂ ಸಿಗಲ್ಲ. ಜಿಲ್ಲೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ  ಮಾತ್ರ ದೊರೆಯಲಿದೆ. ಜಿಲ್ಲಾಡಳಿತದ ಅಧಿಕಾರಿಗಳು ಮೊದಲ ದಿನದಿಂದ ಕೊನೆಯವರೆಗೂ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದೀರಾ. ಸಣ್ಣಪುಟ್ಟ ವ್ಯತ್ಯಾಸಗಳು ಆಗುವುದು ಸಹಜವಾದರೂ ಎಲ್ಲಿಯೂ ಸಂಪ್ರದಾಯ, ಪರಂಪರೆಗೆ ಧಕ್ಕೆ ಆಗದಂತೆ ನೋಡಿಕೊಂಡಿರುವುದು ವಿಶೇಷ ಎಂದು ಹೇಳಿದರು.

ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು. ಜನರ ಕೆಲಸಗಳು ವಿಳಂಬವಾಗಬಾರದು. ಜನರು ನಮ್ಮ ಮೇಲೆ ನಿರೀಕ್ಷೆ ಇಟ್ಟು ಅಧಿಕಾರಕ್ಕೆ ತಂದಿದ್ದಾರೆ. ಅದೇ ರೀತಿ ಅಧಿಕಾರಿಗಳು ಕೆಲಸಮಾಡಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ದಸರಾ ಉಪ ಸಮಿತಿಯ ೧೯ ಉಪ ಸಮಿತಿಗಳ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದ ಸರ್ಕಾರಕ್ಕೆ ದೊಡ್ಡ ಹೆಸರು ಬಂದಿದೆ. ಮೊದಲ ಬಾರಿಗೆ ಪ್ರಜಾಪ್ರಭುತ್ವದ ಆಶಯ ಕುರಿತಂತೆ ರಾಷ್ಟ್ರೀಯ ಸಮ್ಮೇಳನ ನಡೆಸಿದ್ದರಿಂದ ದೊಡ್ಡ ಚರ್ಚೆಯಾಗಿದೆ. ಜನರ ಸಂಭ್ರಮದ ಜತೆಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವಂತಹ ಕಾರ್ಯಕ್ರಮಗಳು ಆಗಬೇಕಿದೆ ಎಂದರು. ಯುವ ದಸರಾವನ್ನು ಹೊರವಲಯಕ್ಕೆ ಸ್ಥಳಾಂತರ ಮಾಡಿದ್ದರಿಂದ ಸಂಚಾರದ ಮೇಲೆ ಒತ್ತಡ ಕಡಿಮೆಯಾಯಿತು. ಜನರು ರಾತ್ರಿ ಹೊತ್ತು ವಾಹನಗಳಲ್ಲಿ ದೀಪಾಲಂಕಾರ ನೋಡಿದ್ದಾರೆ.ಮುಂದೆ ಹೊಸದನ್ನು ಯೋಚಿಸಿ ಕಾರ್ಯರೂಪಕ್ಕೆ ತರೋಣ ಎಂದು ನುಡಿದರು.

ಸಚಿವ ಕೆ.ವೆಂಕಟೇಶ್, ಸಂಸದ ಸುನಿಲ್‌ಬೋಸ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್, ಐಜಿಪಿ ಬೋರಲಿಂಗಯ್ಯ, ಡಿಸಿಪಿಗಳಾದ ಮುತ್ತುರಾಜ್,ಎಸ್.ಜಾನವಿ, ಎಸ್ಪಿ ಎನ್.ವಿಷ್ಣುವರ್ಧನ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಮುಡಾ ಆಯುಕ್ತ ರಘುನಂದನ್, ನಗರಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್, ಜಿಪಂ ಉಪ ಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು,ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಎ.ಎಸ್.ರಂಜಿತ್‌ಕುಮಾರ್, ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ರೀ ಜೆನ್‌ಟ ಸೆಂಟ್ರಲ್ ಜವಾಜಿ ಹೋಟೆಲ್ ಮಾಲೀಕ ಜೆ. ಬಾಪೂಜಿ, ಕೃಷಿ ಇಲಾಖೆ ಜೆಡಿ ರವಿ ಮತ್ತಿತರರು ಹಾಜರಿದ್ದರು.

key words: Banquet for officials, worked hard, success of Dasara-2024, CM Siddaramaiah thanked.

SUMMARY:

Banquet for officials who worked hard for the success of Dasara-2024: CM Siddaramaiah thanked. Nadhabba Dasara Mahotsava was very successful this time. Chief Minister Siddaramaiah expressed satisfaction that there has been a lot of information about all the neat things that have been done.

Font Awesome Icons

Leave a Reply

Your email address will not be published. Required fields are marked *