ದೆಹಲಿ ರೈತರ ಹೋರಾಟ ಬೆಂಬಲಿಸಿ ನ.26 ರಂದು ಮೌನ ಧರಣಿ- ಕುರಬೂರು ಶಾಂತಕುಮಾರ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ನವೆಂಬರ್,20,2024 (www.justkannada.in): ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ಒತ್ತಾಯಿಸಿ ದೆಹಲಿ ಸುತ್ತ ಗಡಿಗಳಲ್ಲಿ ಫೆಬ್ರವರಿ 13 ರಿಂದ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆ ವತಿಯಿಂದ ರೈತರ ಹೋರಾಟ ನಡೆಯುತ್ತಿದ್ದು,  ದೇಶದ ರೈತರ ಬಗ್ಗೆ ನಿರ್ಲಕ್ಷೆ ಭಾವನೆ ತೋರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ  ಆಕ್ರೋಶಗೊಂಡ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ಧಲೆವಾಲಾ ನವಂಬರ್ 26 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ರೈತರಿಗಾಗಿ ನನ್ನ ಜೀವ ಕೊಡಲು ಸಿದ್ಧ ಎಂದು ಹೋರಾಟಕ್ಕಿಳಿದಿದ್ದಾರೆ ದೇಶಾದ್ಯಂತ ಎಲ್ಲ ರೈತ ಸಂಘಟನೆಗಳು ಒಕ್ಕೂರಲ್ಲಿಂದ ಬೆಂಬಲ ಸೂಚಿಸಿವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ಸಂಚಾಲಕ ಕುರಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್,  ದೆಹಲಿ ರೈತರ ಉಪವಾಸ ಸತ್ಯಾಗ್ರಹ ಬೆಂಬಲಿಸಿ ರಾಜ್ಯದ ಎಲ್ಲಾ ಜಿಲ್ಲಾ ಅಧಿಕಾರಿಗಳ ಕಚೇರಿಯ ಮುಂದೆ ರೈತ ಸಂಘಟನೆಗಳು ನ.26 ರಂದು ಮೌನ ಧರಣಿ ನಡೆಸಿ ರಾಷ್ಟ್ರಪತಿಗಳಿಗೆ ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆಎಂದು ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ಸಂಚಾಲಕ ಕುರಬೂರ್ ಶಾಂತಕುಮಾರ್ ತಿಳಿಸಿದ್ದಾರೆ

ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯದಲ್ಲಿಯೂ ದೆಹಲಿ ಹೋರಾಟ ಬೆಂಬಲಿಸಿ ಸಹಸ್ರಾರು ಸಂಖ್ಯೆಯ ರೈತರು ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ. ದೆಹಲಿ ರೈತ ಮುಖಂಡರ ಪ್ರಾಣಕ್ಕೆ ಅಪಾಯ ಆದರೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ದೇಶದ ರೈತರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು

ಬಾಗಲಕೋಟೆ, ಬೆಳಗಾವಿ, ಗುಲ್ಬರ್ಗ ಇನ್ನಿತರ ಜಿಲ್ಲೆಗಳಲ್ಲಿ ಕಬ್ಬಿಗೆ ಎಫ್ ಆರ್ ಪಿ ಮೇಲೆ ಹೆಚ್ಚುವರಿ ದರ ನಿಗದಿ ಮಾಡಬೇಕೆಂದು ರೈತರು ಹೋರಾಟ ನಡೆಸುತ್ತಿದ್ದಾರೆ.  ಬೆಳಗಾವಿ ಅಧಿವೇಶನಕ್ಕೂ ಮೊದಲೇ ಮುಖ್ಯಮಂತ್ರಿಗಳು ರೈತ ಮುಖಂಡರ ಸಭೆ ಕರೆದು ರಾಜ್ಯಾದ್ಯಂತ ಇರುವ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಹತ್ತಳ್ಳಿ ದೇವರಾಜ್,  ಎಂ ಬಿ ಚೇತನ್. ವಿಶ್ರಾಂತ ಕುಲಪತಿ ಎಂ. ಬಿ ದಂಡಿನ್. ನಿವೃತ ಪ್ರಾಂಶುಪಾಲ ಮಹಾದೇವಯ್ಯ. ಡಾ ವಸಂತ್ ಕುಮಾರ್. ಸಾಹಿತಿ ಬಿಸ್ಲಳ್ಳಿ ವೀರಭದ್ರಪ್ಪ, ಬರಡನಪುರ ನಾಗರಾಜ್,  ಕಿರಗಸೂರ ಶಂಕರ, ಮೂಕಹಳ್ಳಿ ಮಹದೇವಸ್ವಾಮಿ, ನೀಲಕಂಠಪ್ಪ, ವಿಜಯೇಂದ್ರ, ಪೈಲ್ವಾನ್ ವೆಂಕಟೇಶ್  ಮುಂತಾದವರು ಉಪಸ್ಥಿತರಿದ್ದರು.

Key words: support, Delhi farmers, struggle, November 26 , Kuraburu Shanthakumar

Font Awesome Icons

Leave a Reply

Your email address will not be published. Required fields are marked *