ದೊಡ್ಮನೆ ಕುಡಿಯ ʼಗ್ರಾಮಾಯಣʼಕ್ಕೆ ನಾಯಕಿಯಾದ ಮೇಘಾ ಶೆಟ್ಟಿ

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಜನಪ್ರಿಯರಾದ ನಟಿ ಮೇಘಾ ಶೆಟ್ಟಿ ಕನ್ನಡ ಸಿನಿಮಾ ರಂಗದಲ್ಲಿ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಒಂದಾದ ಮೇಲೆ ಒಂದು ಸಿನಿಮಾಗಳಿಗೆ ಸಹಿ ಹಾಕುತ್ತಿರುವ ಅವರು ಈಗ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ಘೋಷಿಸಿ ಆರಂಭಿಸಲಾಗಿದ್ದ ನಟ ವಿನಯ್ ರಾಜ್‌ಕುಮಾರ್ ಅವರ ಗ್ರಾಮಾಯಣ ಚಿತ್ರ, ಹೊಸ ನಿರ್ಮಾಣ ತಂಡದೊಂದಿಗೆ ಮತ್ತೆ ಪ್ರಾರಂಭಗೊಂಡಿದೆ. ಅ.4 ರಂದು ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿಕ್ಕಮಗಳೂರಿನ ಕಡೂರಿನಲ್ಲಿ ಮೊದಲ ಶೆಡ್ಯೂಲ್ ನಡೆಯಲಿದೆ. ಈ ಸಿನಿಮಾಕ್ಕೆ ನಿರ್ದೇಶಕ ದೇವನೂರು ಚಂದ್ರು ಆಕ್ಷನ್ ಕಟ್ ಹೇಳಲಿದ್ದಾರೆ ಮತ್ತೆ ಪ್ರಾರಂಭಗೊಂಡಿರುವ ಸಿನಿಮಾದಲ್ಲಿ ನಟಿ ಮೇಘಾ ಶೆಟ್ಟಿ ವಿನಯ್ ರಾಜ್‌ಕುಮಾರ್ ಅವರಿಗೆ ಜೋಡಿಯಾಗಿದ್ದಾರೆ.

ಆರಂಭದಲ್ಲಿ ಸಿನಿಮಾಕ್ಕೆ ವಿನಯ್ ರಾಜ್‌ಕುಮಾರ್ ಅವರನ್ನು ಮಾತ್ರ ನಾಯಕನಾಗಿ ಘೋಷಿಸಿ, ನಾಯಕಿ ಯಾರು ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಈಗ ಇದನ್ನು ಚಿತ್ರತಂಡ ಮತ್ತು ಮೇಘಾ ಶೆಟ್ಟಿ ದೃಢಪಡಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *