ಇತ್ತೀಚಿನ ದಿನಗಳಲ್ಲಿ ದೈವರಾಧನೆ ದೃಶ್ಯಗಳು ಸಿನಿಮಾ, ಧಾರವಾಹಿಗಳಲ್ಲಿ ಕಾಣಿಸುತ್ತಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಸುವರ್ಣ ಚಾನೆಲ್ ನಲ್ಲಿ ಪ್ರಸಾರ ಆಗುತ್ತಿರುವ ‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿಯಲ್ಲಿ ದೈವಾರಾಧನೆ ದೃಶ್ಯಗಳನ್ನು ಪ್ರದರ್ಶಿಸಲಾಗಿತ್ತು. ಈ ವಿಚಾರವಾಗಿ ಮಂಗಳೂರು, ಪಂಜೇಶ್ವರಗಳಲ್ಲಿ ಕೆಲವರು ಧಾರಾವಾಹಿ ವಿರುದ್ಧ ದೂರು ದಾಖಲಿಸಿದ್ದು, ದೈವಾರಾಧನೆಯನ್ನು ಹಣ ಮಾಡುವ ದಂಧೆಯಾಗಿ ಬಳಸಿಕೊಳ್ಳಲಾಗುತ್ತಿದೆ. ಧಾರಾವಾಹಿ, ಸಿನಿಮಾಗಳಲ್ಲಿ ತಮ್ಮ ಆಚರಣೆಗಳ ಅನುಕರಣೆ ಮಾಡುತ್ತಿರುವುದು ಭಾವನೆಗೆ ಧಕ್ಕೆಯಾಗಿದೆ ಎಂದು ದೂರು ನೀಡಿದ್ದರು.
ದೈವದ ದೃಶ್ಯಗಳನ್ನು ಧಾರಾವಾಹಿಯಿಂದ ತೆಗೆದುಹಾಕಬೇಕು, ದೈವಾರಾಧಕರ ಭಾವನೆಗೆ ಧಕ್ಕೆ ತಂದಿರುವ ಧಾರಾವಾಹಿಯ ತಂಡದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿಯನ್ನು ಪ್ರೀತಮ್ ಶೆಟ್ಟಿ ನಿರ್ದೇಶನಕ ನಾನು ಮಂಗಳೂರಿನವನೇ ನಮ್ಮ ಮನೆಯಲ್ಲೂ ದೇವರಾಧನೆ ಇದೇ, ಈಗ ನಾವು ಆಚಾರ ವಿಚಾರ ಗಮನದಲ್ಲಿಟ್ಟುಕೊಂಡೇ ಮಾಡಿರೋದು’ ಎಂದಿದ್ದಾರೆ.‘ಪ್ರಶಾಂತ್ ಮುಂಚೇಯೆ ಹೇಳಿದ್ರು ಒಂದು ವಾರ ನಾನ್ ವೆಜ್ ಸೇವಿಸಬಾರದು ಶೂಟಿಂಗ್ ನಲ್ಲಿ ಯಾರು ಚಪ್ಪಲಿ ಹಾಕಬಾರದು ಅಂತ ನಾವೆಲ್ಲು ಅಪಹಾಸ್ಯ ಮಾಡಿಲ್ಲ , ಧಾರವಾಹಿಯಲ್ಲಿ ನಾಯಕಿ ಕೊರಗಜ್ಜನಭಕ್ತೆ ಮೊದಲಿನಿಂದಲೂ ಹೀಗಾಗಿ ಕಷ್ಟ ಬಂದಾಗ ದೈವ ಯಾವ ರೀತಿ ಪರಿಹಾರ ನೀಡುತ್ತೆ ಎಂಬ ಒಳ್ಳೆ ರೀತಿಯಲ್ಲಿ ನಾವು ತೋರಿಸಿದ್ದೇವೆ ಎಲ್ಲೂ ಅಪಹಾಸ್ಯ ಮಾಡಿಲ್ಲ’ ಎಂದು ಪ್ರೀತಮ್ ಹೇಳಿದ್ದಾರೆ.
ಇನ್ನೂ ಈ ದೃಶ್ಯ ತೆಗೆದುಹಾಕಬೇಕು ಅನ್ನೋದಕ್ಕೆ ಉತ್ತರಿಸಿದ ಅವರು, ‘ಸೋಮವಾರ ಧಾರವಾಹಿಯ ಎಪಿಸೋಡ್ ಪ್ರಸಾರ ಮಾಡುವ ಬಗ್ಗೆ ಮುಖ್ಯಸ್ಥರೆಲ್ಲ ಸೇರಿ ನಿರ್ಧಾರ ತೆಗೆದುಕೊಳ್ಳಬೇಕು. ಧಾರಾವಾಹಿ ಪ್ರದರ್ಶನ ಮಾಡದೇ ಇರೋ ಬಗ್ಗೆ ಈಗಾಲೇ ನಾನು ಏನೂ ಹೇಳೋದಕ್ಕೆ ಆಗಲ್ಲ. ಆದರೆ ಇನ್ನು ಮುಂದೆ ನಾನು ಈ ರೀತಿಯ ದೈವರಾಧನೆ ದೃಶ್ಯಗಳನ್ನು ಮಾಡುವುದಿಲ್ಲ’ ಎಂದಿದ್ದಾರೆ.