ನಂಜನಗೂಡಿನಲ್ಲಿ ಚಿತ್ರನಟ ಡಾ. ಶಿವರಾಜ್‌ಕುಮಾರ್ ದಂಪತಿಗೆ ಸನ್ಮಾನ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಮಗನಾಗಿದ್ದಾರೆ ಡಾ.ಶಿವರಾಜ್ ಕುಮಾರ್ ಅವರು ಡಾ.ರಾಜಕುಮಾರ್ ರವರ ಹೆಸರು ಉಳಿಸುತ್ತಿದ್ದಾರೆ ಡಾ.ರಾಜ್‌ಕುಮಾರ್ ಅವರು ನಮ್ಮ ಜಿಲ್ಲೆಗೆ ಕೀರ್ತಿವಂತರಾಗಿದ್ದಾರೆ ಎಂದು ಸಿಂಹ ಮೂವೀ ಪ್ಯಾರಡೈಸ್ ಮಾಲೀಕರಾದ ಎ.ಜಯಸಿಂಹ ತಿಳಿಸಿದರು.

ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಿತ್ರನಟ ಡಾ.ಶಿವರಾಜ್ ಕುಮಾರ್ ದಂಪತಿಗಳನ್ನು ನಗರದ ನಂಜನಗೂಡು ರಸ್ತೆಯಲ್ಲಿ ಇರುವ ಸಿಂಹ ಮೂವೀ ಪ್ಯಾರಡೈಸ್ ಸಭಾಂಗಣದಲ್ಲಿ ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ.ರಾಜಕುಮಾರ್ ಕುಟುಂಬಕ್ಕೂ ಹಾಗೂ ನಮ್ಮ ಕುಟುಂಬದ ಜೊತೆ ಸ್ನೇಹ ಭಾಂದವ್ಯ ಬಹಳಷ್ಟು ವರ್ಷಗಳಿಂದ ಇದೆ, ರಾಜಕುಮಾರ್ ದಂಪತಿಗಳು ಗಾಜನೂರಿಗೆ ಹೋಗಬೇಕಾದರೆ ನಮ್ಮ ಮನೆಗೆ ಬಂದು ಆತಿಥ್ಯ ಸ್ವೀಕರಿಸಿ ಹೋಗುತ್ತಿದ್ದರು ಎಂದು ನೆನಪಿಸಿ ಕೊಂಡರು.

ಡಾ.ಶಿವರಾಜಕುಮಾರ್ ರವರು ತಂದೆಯ ಮಾರ್ಗದರ್ಶನದಲ್ಲಿ ಬೆಳೆದು ಕೀರ್ತಿವಂತರಾಗಿದ್ದಾರೆ ಭಗವಂನು ಇವರಿಗೆ ಆಯೂರಾರೋಗ್ಯ ದಯಪಾಲಿಸಲಿ ಹಾಗೂ ಇನ್ನು ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸುವಂತಾಗಲಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ಶಿವರಾಜಕುಮಾರ್ ದಂಪತಿಗಳಿಗೆ ಸಿಂಹ ಮೂವೀ ಪ್ಯಾರಡೈಸ್ ವತಿಯಿಂದ ಬೆಳ್ಳೆ ತಟ್ಟೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜೆ.ಅಜಿತ್‌ಕುಮಾರ್‌ಸಿಂಹ ರವರು ಡಾ.ಶಿವರಾಜಕುಮಾರ್ ದಂಪತಿಗಳನ್ನು ಸ್ವಾಗತಿಸಿದರು, ಹರಳು ಕೋಟೆ ಅನಂತನಪ್ರಸಾದ್ ಹಾಗೂ ಜಿಲ್ಲೆಯ ಡಾ. ಶಿವರಾಜ್‌ಕುಮಾರು ಅಭಿಮಾನಿಗಳ ಸಂಘದ ಅಧ್ಯಕ್ಷರು ಮತ್ತು ಅಭಿಮಾನಿಗಳು ಹಾಜರಿದ್ದರು.

Font Awesome Icons

Leave a Reply

Your email address will not be published. Required fields are marked *