ನಟಿ ಆಲಿಯಾ ಭಟ್​ಗೆ ಶುರುವಾಯ್ತು ಡೀಪ್​ಫೇಕ್​ ಕಾಟ

ದೆಹಲಿ: ಭಾರತದಲ್ಲಿ ಡೀಪ್‌ಫೇಕ್‌ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಾಜೋಲ್, ಸಾರಾ ತೆಂಡೂಲ್ಕರ್ ಹೀಗೆ ಹಲವಾರು ಸ್ಟಾರ್‌ ನಟ ನಟಿಯರ, ಸೆಲೆಬ್ರೆಟಿಗಳ ಡೀಪ್‌ಫೇಕ್ ವೀಡಿಯೊಗಳು ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ, ಇದೀಗ ನಟಿ ಆಲಿಯಾ ಭಟ್ ಅವರ ನಗ್ನ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ ಆಲಿಯಾ ಭಟ್ ಮುಖವನ್ನು ಮತ್ತೊಬ್ಬ ಮಹಿಳೆಯ ಅಶ್ಲೀಲ ವಿಡಿಯೋಗೆ ಎಡಿಟ್ ಮಾಡಲಾಗಿದೆ. ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ಯಾರೋ ಕಿಡಿಗೇಡಿ ಈ ರೀತಿ ಕೃತ್ಯ ಎಸಗಿರುವುದು ಸ್ಪಷ್ಟವಾಗಿದೆ. AI ಕುರಿತು ಕೇಂದ್ರ ಸರ್ಕಾರ ಚರ್ಚೆಯ ನಡುವೆ, ಆಲಿಯಾ ಭಟ್ ಈ ವೀಡಿಯೊ ವೈರಲ್‌ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

Font Awesome Icons

Leave a Reply

Your email address will not be published. Required fields are marked *