ನಟಿ ರೋಜಾಗೆ ಅಶ್ಲೀಲ ವಿಡಿಯೋ ಬೆದರಿಕೆ ಕೇಸ್: ಮಾಜಿ ಸಚಿವ ಅರೆಸ್ಟ್

ವಿಶಾಖಪಟ್ಟಣಂ: ಹೆಸರಾಂತ ನಟಿ ಹಾಗೂ ಆಂಧ್ರ ಪ್ರದೇಶದ ಸಚಿವೆಯೂ ಆಗಿರುವ ರೋಜಾ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಡಿಪಿಯ ಮಾಜಿ ಸಚಿವ ಬಂಡಾರು ಸತ್ಯನಾರಾಯಣ ಅವರನ್ನು ನಿನ್ನೆ ಬಂಧಿಸಲಾಗಿದೆ.

ಹಲವು ದಿನಗಳಿಂದ ರೋಜಾ ಮತ್ತು ಬಂಡಾರು ಸತ್ಯನಾರಾಯಣ ಅವರಿಗೆ ಜಟಾಪಟಿ ನಡೆಯುತ್ತಿದೆ. ರಾಜಕೀಯವಾಗಿ ವಿರೋಧಿಗಳು ಆಗಿರುವ ಇವರು, ಹಾದಿ ರಂಪ ಬೀದಿ ರಂಪ ಮಾಡುತ್ತಿದ್ದಾರೆ. ಹಾಗಾಗಿ ರೋಜಾ ಅವರ ಅಶ್ಲೀಲ ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸೂಕ್ತ ಸಮಯದಲ್ಲಿ ರಿಲೀಸ್ ಮಾಡುತ್ತೇನೆ ಎಂದು ಬಂಡಾರು ಹೇಳಿದ್ದರು. ಈ ಕುರಿತಂತೆ ರೋಜಾ ಅವರು ಗುಂಟೂರಿನ ನಗರಂಪಲೆಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಕ್ಟೋಬರ್ 2 ರಂದು ಸೋಮವಾರ ಬೆಳಗ್ಗೆಯೇ ವಿಶಾಖಪಟ್ಟಣಂ ಜಿಲ್ಲೆಯ ಪರವಾಡದ ವೆನ್ನಿಲಪಾಲೆಂನಲ್ಲೇ ಬಂಡಾರು ಅವರನ್ನು ಬಂಧಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *