ನಟಿ ಲೀಲಾವತಿ ಸ್ಮಾರಕ ನಿರ್ಮಾಣಕ್ಕೆ ಇಂದು ಚಾಲನೆ

ಬೆಂಗಳೂರು: ಹಿರಿಯ ನಟಿ ಲೀಲಾವತಿ ಅವರ  ಸ್ಮಾರಕ ನಿರ್ಮಾಣಕ್ಕೆ ವಿನೋದ್ ರಾಜ್  ಇಂದು ಕುಟುಂಬ  ಚಾಲನೆ ನೀಡಿದ್ದಾರೆ.

ನೆಲಮಂಗಲದ ತೋಟ ಮನೆಯ ಬಳಿ ಲೀಲಾವತಿ ಸ್ಮಾರಕ ನಿರ್ಮಾಣಕ್ಕೆ ವಿನೋದ್ ರಾಜ್ ಚಾಲನೆ ನೀಡಿದ್ದಾರೆ. ಪೂಜೆಯ ಕಾರ್ಯದಲ್ಲಿ ವಿನೋದ್ ರಾಜ್, ಪತ್ನಿ ಅನು, ಪುತ್ರ ಯುವರಾಜ್ ಭಾಗಿಯಾಗಿದ್ದಾರೆ.

ಸ್ಮಾರಕ ಚಾಲನೆಯ ಬಳಿಕ ವಿನೋದ್ ರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಲೀಲಾವತಿ ಅವರ ಸ್ಮಾರಕ 55 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ. 120 ದಿನಗಳಲ್ಲಿ ಸ್ಮಾರಕ ಕೆಲಸ ಮುಗಿಯಲಿದೆ, ಅವರ ಮೊದಲ ಸಿನಿಮಾದಿಂದ ಕೊನೆಯ ಸಿನಿಮಾದ ವರೆಗೆ ಗ್ಯಾಲರಿಯನ್ನ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದೇವೆ. ಅಮ್ಮನವರ ಸಮಾಧಿ ಕೇವಲ ಸಮಾಧಿ ಅಲ್ಲ ಅದು ಒಂದು ಆಧ್ಯಾತ್ಮಿಕ ಕ್ಷೇತ್ರವನ್ನಾಗಿ ಮಾಡುತ್ತೇವೆ. ತಾಯಿಯ ಸ್ಮಾರಕಕ್ಕಾಗಿ ಸರ್ಕಾರದಿಂದ ಯಾವುದೇ ಅಪೇಕ್ಷೆ, ಹಣ ಪಡೆಯದೆ ನಾವೇ ಸಮಾಧಿ ಕಟ್ಟಲು ತೀರ್ಮಾನ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *